ಬೆಂಗಳೂರು: ಕೇರಳದ ಪ್ರವಾಹ ಸಂತ್ರಸ್ತರಿಗೆ ಆರ್‌ಎಸ್‌ಎಸ್ ಸಹಾಯ ಮಾಡುತ್ತಿರುವ ಟ್ವೀಟ್ ನ್ನು ರೀಟ್ವೀಟ್ ಮಾಡಿ ಬ್ರಾವೋ ಸಂಘೀಸ್ ಎಂದು ಬಾಲಿವುಡ್ ನಟಿ ಕೋಯಿನಾ ಮಿತ್ರಾ ಶ್ಲಾಘಸಿದ್ದಾರೆ.ಈಕೆಯ ಟ್ವೀಟ್ 225ಕ್ಕಿಂತಲೂ ಹೆಚ್ಚು ಬಾರಿ ರೀಟ್ವೀಟ್ ಆಗಿದ್ದು 800ಕ್ಕಿಂತ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಕೋಯಿನಾ ಮಿತ್ರಾ ಅವರು ರೀಟ್ವೀಟ್ ಮಾಡಿದ್ದು ಡಾ.ಜಿ ಪ್ರಧಾನ್ ಅವರ ಟ್ವೀಟ್. ಪ್ರಧಾನಿ ಮೋದಿ, ರೈಲ್ವೆ ಸಚಿವ ಪೀಯುಶ್ ಗೋಯಲ್ ಅವರ ಕಚೇರಿ ಮತ್ತು ಆರ್ ಬಿ ಐ ನಿರ್ದೇಶಕ ಎಸ್. ಗುರುಮೂರ್ತಿ ಅವರು ಡಾ.ಜಿ. ಪ್ರಧಾನ್ ಅವರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ ಆಗಸ್ಟ್ 13ರಂದು ಟ್ವೀಟಿಸಿದ್ದಪ್ರಧಾನ್ ಅವರ ಟ್ವೀಟ್ 2,007 ಬಾರಿ ರೀಟ್ವೀಟ್ ಆಗಿದೆ.
ಖಾಕಿ ಚಡ್ಡಿ ಧರಿಸಿದ ಆರ್‌ಎಸ್‌ಎಸ್ ಕಾರ್ಯಕರ್ತರು ಸಹಾಯ ಮಾಡುತ್ತಿರುವ ಇದೇ ಚಿತ್ರ ದಿ ಯೂತ್ ಎಂಬ ಫೇಸ್‍ಬುಕ್ ಪುಟದಲ್ಲಿ ಶೇರ್ ಆಗಿದ್ದು, ಮಾಧ್ಯಮಗಳು ಇದನ್ನೆಲ್ಲಾ ತೋರಿಸುವುದಿಲ್ಲ ಎಂಬ ಶೀರ್ಷಿಕೆ ನೀಡಲಾಗಿದೆ. ಇದನ್ನು ಪೋಸ್ಟ್ ಮಾಡಿದ ವ್ಯಕ್ತಿ ಸ್ವಯಂ ಸೇವಕ್ ಎಂದು ಹೇಳಿಕೊಂಡಿದ್ದಾನೆ.
ಮಾಧ್ಯಮಗಳು ಇದನ್ನೆಲ್ಲಾ ತೋರಿಸುವುದಿಲ್ಲ ಎಂಬ ಟಿಪ್ಪಣಿಯೊಂದಿಗೆ ಪೋಸ್ಟ್ ಕಾರ್ಡ್ ಫ್ಯಾನ್ಸ್ ಪೇಜ್ ನಲ್ಲಿಯೂ ಇದೇ ಚಿತ್ರ ಶೇರ್ ಆಗಿದೆ.
ಇದು ಹಳೆ ಚಿತ್ರ
ಸೆಪ್ಟೆಂಬರ್ 2018ರಲ್ಲಿ ಇದೇ ಚಿತ್ರವನ್ನು ಪೋಸ್ಟ್ ಕಾರ್ಡ್ ನ್ಯೂಸ್ ಶೇರ್ ಮಾಡಿತ್ತು.ಬಿಹಾರ ಪ್ರವಾಹ ಸಂತ್ರಸ್ತರಿಗೆ ಆರ್‌ಎಸ್‌ಎಸ್ ಕಾರ್ಯಕರ್ತರು ಸಹಾಯ ಮಾಡುತ್ತಿರುವ ಚಿತ್ರ ಇದಾಗಿದ್ದು, ಮಾಧ್ಯಮದವರ ವಿರುದ್ಧ ಕಿಡಿ ಕಾರುವ ಶೀರ್ಷಿಕೆಯನ್ನೇ ಇದಕ್ಕೆ ನೀಡಲಾಗಿತ್ತು.
2016ರಲ್ಲಿ ಬಂಗಾಳದಲ್ಲಿ ಪ್ರವಾಹ ಬಂದಾಗಲೂ ಇದೇ ಚಿತ್ರವನ್ನು ಆಗಸ್ಟ್ 27 ಆಗಸ್ಟ್ 28ಮತ್ತುಆಗಸ್ಟ್ 29 ರಂದು ಬೇರೆ ಬೇರೆ ಖಾತೆಗಳಲ್ಲಿ ಶೇರ್ ಮಾಡಲಾಗಿತ್ತು ಎಂದು ಆಲ್ಟ್ ನ್ಯೂಸ್ ಹೇಳಿದೆ.
2016 ಆಗಸ್ಟ್ ತಿಂಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಪ್ರವಾಹ ಬಂದಿತ್ತು. ಆದರೆ ಇದು ಪ್ರವಾಹದ ವೇಳೆ ತೆಗೆದ ಫೋಟೊವೇ? ಎಂದು ದೃಢೀಕರಿಸಲು ನಮಗೆ ಸಾಧ್ಯವಾಗಿಲ್ಲ ಎಂದು ಹೇಳಿರುವ ಆಲ್ಟ್ ನ್ಯೂಸ್, ಈ ಚಿತ್ರ ಕೇರಳ ಪ್ರವಾಹದಲ್ಲಿ ಸಹಾಯ ಮಾಡುವ ಚಿತ್ರವಂತೂ ಅಲ್ಲವೇ ಅಲ್ಲ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.