ADVERTISEMENT

ಕೇರಳ ಪ್ರವಾಹ: ಪದೇ ಪದೇ ಹಳೆ ಫೋಟೊಗಳನ್ನು ಶೇರ್ ಮಾಡುತ್ತಿದೆ ಪೋಸ್ಟ್ ಕಾರ್ಡ್!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 12:04 IST
Last Updated 22 ಆಗಸ್ಟ್ 2018, 12:04 IST
   

ಬೆಂಗಳೂರು:'ಕಣ್ಣು ತೆರೆದು ನೋಡಿ, ಕೇರಳದ 11 ಜಿಲ್ಲೆಗಳಲ್ಲಿ ಸ್ವಯಂ ಸೇವಕರು ಸಹಾಯ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ಕೆಲಸ ಮಾಡುತ್ತಿದೆ. ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿರುವಆರ್‌ಎಸ್‌ಎಸ್‌ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳೋಣ ಎಂಬ ಟಿಪ್ಪಣಿಯೊಂದಿಗೆ ಪೋಸ್ಟ್ ಕಾರ್ಡ್ ಫ್ಯಾನ್ಸ್ ಫೇಸ್‌ಬುಕ್‌ ಪುಟದಲ್ಲಿ ಕೆಲವುಚಿತ್ರಗಳನ್ನು ಶೇರ್ ಮಾಡಲಾಗಿದೆ.

ಇದೇ ಚಿತ್ರಗಳು ಹಲವಾರು ಟ್ವಿಟರ್ ಖಾತೆಗಳಲ್ಲಿಯೂ ಶೇರ್ ಆಗಿದೆ.ಆದರೆ ಇದು ಹಳೆ ಫೋಟೊ!


ಕೇರಳದಲ್ಲಿ ಪ್ರವಾಹ ಸಂತ್ರಸ್ತರಿಗೆ ಆರ್‌ಎಸ್‌ಎಸ್‌ಕಾರ್ಯಕರ್ತರು ನೆರವಾಗುತ್ತಿರುವುದು ಎಂದು ಹೇಳುತ್ತಿರುವಫೋಟೊ ಕೊಲ್ಲಂ ದೇವಾಲಯದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಆರ್‌ಎಸ್‌ಎಸ್‌ ಮತ್ತು ಸೇವಾ ಭಾರತಿ ಕಾರ್ಯಕರ್ತರು ಸಹಾಯ ಮಾಡುತ್ತಿರುವುದಾಗಿದೆ.2016ರಲ್ಲಿ ಆರ್‌ಎಸ್‌ಎಸ್‌ ಫೇಸ್‌ಬುಕ್‌ ಪುಟದಲ್ಲಿ ಈ ಫೋಟೊ ಶೇರ್ ಆಗಿತ್ತು.

ADVERTISEMENT

ಜುಲೈನಲ್ಲಿ ಪೋಸ್ಟ್ ಕಾರ್ಡ್ ನ್ಯೂಸ್ ನ್ನು ಫೇಸ್‍ಬುಕ್ ರದ್ದು ಮಾಡಿತ್ತು .ಇದಾದ ನಂತರ ಪೋಸ್ಟ್ ಕಾರ್ಡ್ ಫ್ಯಾನ್ಸ್ ಎಂಬ ಪುಟದಲ್ಲಿ ಈ ರೀತಿಯ ಸುದ್ದಿಗಳು ಶೇರ್ ಆಗುತ್ತಿವೆ.ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಫ್ಯಾನ್ಸ್ ಎಂಬ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಪುಟವನ್ನು ಈಗ Post Card Fans ಎಂದು ಬದಲಿಸಲಾಗಿದೆ.

ಕೇರಳ ಪ್ರವಾಹ ಸಂತ್ರಸ್ತರಿಗೆ ಆರ್‌ಎಸ್‌ಎಸ್‌ಕಾರ್ಯಕರ್ತರು ಸಹಾಯ ಮಾಡುತ್ತಿರುವುದು ಎಂಬ ಇನ್ನೊಂದು ಪೋಸ್ಟ್ ಈ ಪೇಜ್‍ನಲ್ಲಿದೆ. ಆದರೆ ಅದು 2013ರಲ್ಲಿ ಇಡುಕ್ಕಿಯಲ್ಲಿ ಭೂಕುಸಿತ ಸಂಭವಿಸಿದಾಗ ತೆಗೆದ ಫೋಟೊ ಆಗಿದೆ ಎಂದು ಆಲ್ಟ್ ನ್ಯೂಸ್ವರದಿ ಮಾಡಿದೆ.

ಇದನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.