ADVERTISEMENT

‘ಎಕ್ಸ್’ನಲ್ಲಿ ನೀವು ಮಾಡಿದ ಲೈಕ್ ಬೇರೆ ಯಾರಿಗೂ ಕಾಣಲ್ಲ: ಬರುತ್ತಿದೆ ಹೊಸ ಫೀಚರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2024, 13:03 IST
Last Updated 12 ಜೂನ್ 2024, 13:03 IST
   

ನವದೆಹಲಿ: ಶೀಘ್ರವೇ ಸಾಮಾಜಿಕ ಮಾಧ್ಯಮ ‘ಎಕ್ಸ್’ ಬಳಕೆದಾರರು ಬೇರೆ ಯಾವ ಬಳಕೆದಾರರಿಗೂ ಕಾಣದಂತೆ ಲೈಕ್ ಒತ್ತುವ ಫೀಚರ್ ಪಡೆಯಲಿದ್ದಾರೆ.

ಬಳಕೆದಾರರ ಖಾಸಗಿತನದ ರಕ್ಷಣೆಯ ದೃಷ್ಟಿಯಿಂದ ಎಲ್ಲ ಬಳಕೆದಾರರಿಗೆ ಲೈಕ್‌ಗಳನ್ನು ‘ಪ್ರೈವೇಟ್’ ಆಗಿಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಎಲಾನ್ ಮಸ್ಕ್ ಒಡೆತನದ ‘ಎಕ್ಸ್’ ಹೇಳಿದೆ.

‘ಯಾವುದೇ ಖಾತೆಯ ಪೋಸ್ಟ್ ಅನ್ನು ಲೈಕ್ ಮಾಡಿದಾಗ ನೀವು ಅದನ್ನು ನೋಡಬಹುದು. ಆದರೆ, ಇತರೆ ಬಳಕೆದಾರರು ಅದನ್ನು ನೋಡಲು ಸಾಧ್ಯವಿಲ್ಲ’ ಎಂದು ಎಕ್ಸ್‌ನ ಎಂಜಿನಿಯರಿಂಗ್ ತಂಡ ಹೇಳಿದೆ.

ADVERTISEMENT

ಬಳಕೆದಾರರು ತಮ್ಮ ಪೋಸ್ಟ್ ಅನ್ನು ಯಾರೆಲ್ಲ ಲೈಕ್ ಮಾಡಿದ್ದಾರೆ ಎಂಬುದನ್ನು ನೋಡಬಹುದಾಗಿದೆ.

ಲೈಕ್‌ಗಳ ಸಂಖ್ಯೆ ಮತ್ತು ಇತರೆ ಅಂಕಿಅಂಶಗಳು ನೋಟಿಫಿಕೇಶನ್ ಕೇಳಗೆ ಈಗಲೂ ಕಾಣಸಿಗಲಿವೆ.

ಲೈಕ್ ಮಾಡಿದ್ದಕ್ಕಾಗಿ ಬೇರೆ ಯಾರಿಂದಲೊ ದಾಳಿಗೆ ಒಳಗಾಗುವುದನ್ನು ತಡೆಯುವ ನಿಟ್ಟಿನಲ್ಲಿ ಬಳಕೆದಾರರಿಗೆ ಈ ಅವಕಾಶ ಕಲ್ಪಿಸುವುದು ಅತ್ಯಂತ ಮುಖ್ಯವಾಗಿತ್ತು ಎಂದು ಮಸ್ಕ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ವರದಿಗಳ ಪ್ರಕಾರ, ಎಕ್ಸ್‌ನ ಪ್ರೀಮಿಯಂ ಬಳಕೆದಾರರಿಗೆ ಪ್ರೈವೇಟ್ ಲೈಕ್ಸ್ ಫೀಚರ್ ಈಗಾಗಲೇ ಲಭ್ಯವಿದೆ.

‘ಪಬ್ಲಿಕ್ ಲೈಕ್‌ಗಳು ಕೆಟ್ಟ ನಡವಳಿಕೆಗಳು ದಾರಿಮಾಡಿಕೊಡುತ್ತವೆ. ಉದಾಹರಣೆಗೆ ಯಾವುದೇ ಒಂದು ಸೂಕ್ಷ್ಮ ಪೋಸ್ಟ್ ಅನ್ನು ಲೈಕ್ ಮಾಡುವಾಗ ಅದರಿಂದ ನಾವು ಟ್ರೋಲ್‌ಗೆ ಒಳಗಾಗಬಹುದು ಅಥವಾ ತಮ್ಮ ಇಮೇಜ್ ಹಾಳಾಗಬಹುದು ಎಂಬ ಭಯದಲ್ಲಿರುತ್ತಾರೆ. ಸದ್ಯದಲ್ಲೇ, ಯಾರಿಗೂ ತಿಳಿಯದಂತೆ ನೀವು ಲೈಕ್ ಮಾಡಬಹುದಾದ ಅವಕಾಶ ಸಿಗಲಿದೆ. ಇದರಿಂದ ನೀವು ಮತ್ತಷ್ಟು ಲೈಕ್ ಮಾಡಬಹುದು. ಇದರಿಂದ ನಿಮ್ಮ ಅಲ್ಗಾರಿದಂ ಸಹ ಉತ್ತಮಗೊಳ್ಳಲಿದೆ’ ಎಂದು ಎಕ್ಸ್‌ ಎಂಜಿನಿಯರಿಂಗ್ ನಿರ್ದೇಶಕ ಹಾವ್‌ಫೆಲ್ ವಾಂಗ್ ಮೇತಿಂಗಳಲ್ಲಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.