ADVERTISEMENT

ಕರುಣಾನಿಧಿ ಜನ್ಮದಿನದಂದು #HBDFatherofcorruption ಟ್ರೆಂಡ್‌ ಆಗುವುದೇಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜೂನ್ 2021, 7:49 IST
Last Updated 3 ಜೂನ್ 2021, 7:49 IST
ಸಮಾರಂಭವೊಂದರಲ್ಲಿ ಕರುಣಾನಿಧಿ ಅವರ ಚಿತ್ರ ಪ್ರದರ್ಶಿಸುತ್ತಿರುವ ಡಿಎಂಕೆ ಬೆಂಬಲಿಗರು (ಪಿಟಿಐ)
ಸಮಾರಂಭವೊಂದರಲ್ಲಿ ಕರುಣಾನಿಧಿ ಅವರ ಚಿತ್ರ ಪ್ರದರ್ಶಿಸುತ್ತಿರುವ ಡಿಎಂಕೆ ಬೆಂಬಲಿಗರು (ಪಿಟಿಐ)   

ಭಾರತದಲ್ಲಿ #HBDFatherofcorruption ( ಭ್ರಷ್ಟಾಚಾರದ ಜನಕನಿಗೆ ಹುಟ್ಟುಹಬ್ಬದ ಶುಭಾಶಯಗಳು)ಎಂಬ ಹ್ಯಾಶ್‌ಟ್ಯಾಗ್ ಎರಡು ದಿನಗಳಿಂದಲೂ ಟ್ರೆಂಡಿಂಗ್‌ನಲ್ಲಿದೆ. ಗಮನಿಸಬೇಕಾದ ಅಂಶವೆಂದರೆ,ಈ ಹ್ಯಾಷ್‌ ಟ್ಯಾಗ್‌ನ ಅಡಿಯಲ್ಲಿ ‌ಪೋಸ್ಟ್‌ ಆಗಿರುವಎಲ್ಲಾ ಟ್ವೀಟ್‌ಗಳು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಕಲೈಜ್ಞರ್‌, ದಿವಂಗತಎಂ. ಕರುಣಾನಿಧಿ ಅವರನ್ನು ಕುರಿತು ಮಾತನಾಡುತ್ತಿವೆ.

ತಮಿಳುನಾಡಿನ ಪ್ರಖ್ಯಾತ ರಾಜಕಾರಣಗಳಲ್ಲಿ ಒಬ್ಬರಾದ ಕರುಣಾನಿಧಿ ಅವರುಸುಮಾರು ಎರಡು ದಶಕಗಳ ಕಾಲ ಅಲ್ಲಿ ಮುಖ್ಯಮಂತ್ರಿಯಾಗಿದ್ದವರು.

ADVERTISEMENT

ಜೂನ್‌ 3 ಕರುಣಾನಿಧಿ ಅವರ ಜನ್ಮದಿನ.ಅವರ ಹುಟ್ಟುಹಬ್ಬದ ದಿನ, ಪ್ರತಿಬಾರಿಯೂ#HBDFatherofcorruption ಟ್ರೆಂಡ್‌ ಆಗುತ್ತಿದೆ. ಕಳೆದಬಾರಿಯಂತೆ ಈ ಬಾರಿಯೂ ಟ್ರೆಂಡ್‌ ಆಗಿದೆ.

#HBDFatherofcorruption ಅಡಿಯಲ್ಲಿ ಪೋಸ್ಟ್‌ ಆದ ಟ್ವೀಟ್‌ಗಳಲ್ಲಿ ಕುರುಣಾನಿಧಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲದ ಭ್ರಷ್ಟಾಚಾರ ಪ್ರಕರಣಗಳ ಮಾಧ್ಯಮ ವರದಿ, ಕುಟುಂಬ ರಾಜಕಾರಣ, 2ಜಿ ತರಂಗಾಂತರ ಹಗರಣಗಳ ಕುರಿತು ಉಲ್ಲೇಖಗಳಿವೆ.

ಗೂಗಲ್‌ನಲ್ಲಿ ಹುಡುಕಾಡಿದರೆ ಕುರುಣಾನಿಧಿ ಹೆಸರು ‌

ತಮಿಳುನಾಡಿನ ಭ್ರಷ್ಟಾಚಾರದ ಜನಕ ಯಾರು ಎಂದು (Who is the Father of Corruption in Tamilnadu?) ಯಾರಾದರೂ ಗೂಗಲ್‌ ಸರ್ಚ್‌ ಎಂಜಿನ್‌ನಲ್ಲಿ ಹುಡುಕಿದರೆ.ಅಲ್ಲಿ ಮೊದಲಿಗೆ ಕರುಣಾನಿಧಿ ಅವರ ವಿಕಿಪೀಡಿಯಾ ತೆರೆದುಕೊಳ್ಳುತ್ತದೆ. ನಂತರದ ಹತ್ತು ವೆಬ್‌ಪುಟಗಳು ಕರುಣಾನಿಧಿ ಅವರಿಗೆ ಸಂಬಂಧಿಸಿದ್ದಾಗಿರುತ್ತವೆ.

ಈ ವೆಬ್‌ಸರ್ಚ್‌ನ ಫಲಿತಾಂಶದ ಸ್ಕ್ರೀನ್‌ಶಾಟ್‌ ತೆಗೆದು ಹಲವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

#HBDFatherOfModernTamilnadu ಮೂಲಕ ತಿರುಗೇಟು

‌#HBDFatherofcorruptionಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆದಾಗೆಲ್ಲ#HBDFatherOfModernTamilnadu ಹ್ಯಾಷ್‌ ಟ್ಯಾಗ್‌ ಕೂಡ ಟ್ರೆಂಡ್‌ ಆಗುತ್ತದೆ. ಕರುಣಾನಿಧಿ ಅವರ ಅಧಿಕಾರವಧಿಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಧಾರಗಳು, ಅಭಿವೃದ್ಧಿ ಕಾರ್ಯಗಳನ್ನು ಈ ಪೋಸ್ಟ್‌ಗಳಲ್ಲಿ ಸ್ಮರಿಸಲಾಗುತ್ತದೆ. ಈ ಮೂಲಕಡಿಎಂಕೆ (ಡ್ರಾವಿಡ ಮುನ್ನೇತ್ರ ಕಳಗಂ)ಬೆಂಬಲಿಗರು #HBDFatherofcorruption ಹ್ಯಾಷ್‌ಟ್ಯಾಗ್‌ನ ಪೋಸ್ಟರ್‌ ಗಳಿಗೆ ತಿರುಗೇಟು ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.