ADVERTISEMENT

ಟ್ವಿಟರ್‌ನಲ್ಲಿ ಚರ್ಚೆಗೆ ಗ್ರಾಸವಾಯ್ತು ಶಶಿ ತರೂರ್ ಬಳಸಿದ ‘ವರ್ಡ್ ಆಫ್‌ ದಿ ಡೇ’!

ಮಹಾರಾಷ್ಟ್ರ ರಾಜಕೀಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 10:16 IST
Last Updated 27 ನವೆಂಬರ್ 2019, 10:16 IST
ಶಶಿ ತರೂರ್‌
ಶಶಿ ತರೂರ್‌   

ಮುಂಬೈ:ಸಮಾಜಿಕ ಮಾಧ್ಯಮಗಳಲ್ಲಿ ಆಗಾಗ ಹೊಸ ಮತ್ತು ಕಠಿಣ ಆಂಗ್ಲ ಪದಗಳನ್ನು ಬಳಸುವ ಮೂಲಕ ಸುದ್ದಿಯಾಗುವಕಾಂಗ್ರೆಸ್ ನಾಯಕ ಶಶಿ ತರೂರ್‌ ಈಗ ಮತ್ತೆ ಹೊಸದೊಂದು ಪದ ಬಳಸಿ ಸದ್ದು ಮಾಡಿದ್ದಾರೆ.ಮಹಾರಾಷ್ಟ್ರ ರಾಜಕೀಯ ವಿದ್ಯಮಾನವನ್ನುವಿವರಿಸಲು ಅವರು #WordOfTheDay ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಟ್ವಿಟರ್‌ನಲ್ಲಿ ಆಂಗ್ಲ ಶಬ್ದವೊಂದನ್ನು ಬಳಸಿದ್ದಾರೆ.

‘#WordOfTheDay ಫಾರ್ ಮಹಾರಾಷ್ಟ್ರ: ಜುಗ್ವಾಂಗ್ (Zugzwang - ಗೆಲುವು ಕೂಡಾ ಸೋಲಾಗಿ ಪರಿವರ್ತನೆಗೊಳ್ಳುವುದು ಅಥವಾ ಅನಿವಾರ್ಯವಾಗಿ ಮುಂದಿಡುವ ಹೆಜ್ಜೆ ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸುವುದು). ಚೆಸ್ ಅಥವಾ ಇತರ ಕೆಲವು ಆಟಗಳಲ್ಲಿ ಕಂಡುಬರುವ ಪರಿಸ್ಥಿತಿ. ಇಲ್ಲಿ ಆಟಗಾರನು ಅಪಾಯಕಾರಿ ಸ್ಥಾನಕ್ಕೆ ಚಲಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಸಂಭವನೀಯ ಕ್ರಮವು ಆತನ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವುದನ್ನುಜುಗ್ವಾಂಗ್ ಎನ್ನಲಾಗುತ್ತದೆ. ಇದನ್ನು ಆಟದ ಸಿದ್ಧಾಂತದ ಪ್ರಕಾರ ನೋಡಿದರೆ, ಗೆಲುವು ಸಹ ಸೋಲಾಗಿ ಪರಿವರ್ತನೆಯಾಗುತ್ತದೆ’ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಟ್ವಿಟರ್‌ನಲ್ಲಿ ಅನೇಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ADVERTISEMENT

‘ಉದ್ಧವ್ ಠಾಕ್ರೆ ಸಹ ಒಬ್ಬ ಜುಗ್ವಾಂಗ್. ಅವರೂ ಶೀಘ್ರದಲ್ಲೇ ಎಚ್.ಡಿ.ಕುಮಾರಸ್ವಾಮಿ ಅವರಂತೆ ಕಣ್ಣೀರು ಹಾಕುವ ಪರಿಸ್ಥಿತಿ ಬರಬಹುದು. ಶರದ್ ಪವಾರ್ ಕೂಡಜುಗ್ವಾಂಗ್, ಯಾಕೆಂದರೆ ಸದ್ಯದಲ್ಲೇ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳುಶರದ್ ಪವಾರ್ ಮತ್ತು ಅವರ ಪಕ್ಷದ ಹಿರಿಯ ನಾಯಕರ ಮನೆ ಬಾಗಿಲನ್ನು ತಟ್ಟಲಿದ್ದಾರೆ. ಕಾಂಗ್ರೆಸ್ ಸಹ ಜುಗ್ವಾಂಗ್. ಮಹಾರಾಷ್ಟ್ರದಲ್ಲಿ ನಂ.1 ಆಗಿದ್ದ ಪಕ್ಷವನ್ನು ಬಿಜೆಪಿ ಈಗಾಗಲೇ ನಂ.4ಕ್ಕೆ ತಳ್ಳಿದೆ’ ಎಂದು ಪಲ್ಲವಿ (@pallavict) ಎಂಬುವವರು ಟ್ವೀಟ್ ಮಾಡಿದ್ದಾರೆ.

‘ನಾನೂ ಹವ್ಯಾಸವಾಗಿ ಚೆಸ್ ಆಡುತ್ತೇನೆ. ಬಿಜೆಪಿಯ ಜುಗ್ವಾಂಗ್ ಈಗ ಮುಗಿದಿದೆ. ಶಿವಸೇನಾದ್ದು ಈಗ ಆರಂಭವಾಗಿದೆ. ನಾನು ತಿಳಿದ ಮಟ್ಟಿಗೆ ಶಿವಸೇನಾದ ಮತದಾರ ಬಿಜೆಪಿಗಿಂತಲೂ ಹೆಚ್ಚು ಉಗ್ರ ಹಿಂದುತ್ವ ನಿಲುವು ಹೊಂದಿದವರು. ಅವರು ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆಗೆ ಹೇಗೆ ಬೆರೆಯಲಿದ್ದಾರೆ ಎಂಬುದನ್ನು ನೋಡುವುದೇ ಆಸಕ್ತಿದಾಯಕ’ ಎಂದು ಹಿಮಾಂಶು ಮಾಂದ್‌ಪೆ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಒಹ್. ಶಶಿ ಸರ್ ಅವರು ಯಾವಾಗಲೂ ಶೇಕ್ಸ್‌ಪಿಯರ್‌ಅನ್ನು ಕೋಟ್ ಮಾಡುತ್ತಾರೆ’ ಎಂದು ಶುಭಂ ಬ್ರಹ್ಮಾಂಕರ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

‘ಚೆಸ್‌ನಲ್ಲಿ ಜುಗ್ವಾಂಗ್ ಪದವು ಪ್ರತಿಯೊಂದು ಬಲವಂತದ ನಡೆಯೂ ನಿಮ್ಮ ಸ್ಥಿತಿಯನ್ನು ನೀವು ಮತ್ತಷ್ಟು ಹದಗೆಡಿಸುತ್ತಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಅಂದರೆ ನೀವು ಚೆಕ್‌ಮೇಟ್ ಆಗುತ್ತೀರಿ ಅಥವಾ ರಾಜೀನಾಮೆ ನೀಡುತ್ತೀರಿ. ಸದ್ಯದ ಮಹಾರಾಷ್ಟ್ರದ ರಾಜಕೀಯ ಸ್ಥಿತಿ ಅದ್ಭುತವಾಗಿದೆ ಶಶಿ ಸರ್’ ಎಂದು ಡಾ. ಅಮಿತ್ ಭಾರತಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ಟ್ವೀಟ್ ಮಾಡಿದ್ದ ತರೂರ್ ‘floccinaucinihilipilification’ ಎಂಬ ಪದ ಬಳಸಿ ಟ್ವೀಟಿಗರನ್ನು ಬೇಸ್ತುಬೀಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.