ನವದೆಹಲಿ: 1990ರಲ್ಲಿ ಕಾಶ್ಮೀರಿಪಂಡಿತರು ನಿರಾಶ್ರಿತರಾಗಲು ಕಾರಣರಾದವರ ವಿರುದ್ಧಪ್ರತೀಕಾರಕ್ಕೆ ಆಹ್ವಾನ ನೀಡಿದನಿವೃತ್ತ ಸೇನಾಧಿಕಾರಿ ಎಸ್‌ಪಿ ಸಿನ್ಹಾಕೊಲೆಯ ಸೇಡು ಕೊಲೆಯಿಂದ, ಅತ್ಯಾಚಾರದ ಸೇಡು ಅತ್ಯಾಚಾರದಿಂದಲೇ ತೀರಿಸಬೇಕು ಎಂದಿದ್ದಾರೆ.
ಟಿವಿ9 ಭಾರತ್‌ವರ್ಷ್ ಎಂಬ ಹಿಂದಿ ಸುದ್ದಿವಾಹಿನಿಯಲ್ಲಿ ನಡೆದ ಲೈವ್ ಚರ್ಚೆಯಲ್ಲಿ ಮಾಜಿ ಸೇನಾಧಿಕಾರಿ ಈ ರೀತಿ ಹೇಳಿದ್ದಾರೆ. ಸಿನ್ಹಾ ಮಾತಿಗೆ ಚರ್ಚೆಯಲ್ಲಿ ಭಾಗಿಯಾಗಿದ್ದ ಗಣ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಿನ್ಹಾ ಅವರ ಹೇಳಿಕೆಗೆ ಟ್ವಿಟರ್‌ನಲ್ಲಿಆಕ್ರೋಶ ವ್ಯಕ್ತವಾಗಿದೆ.
ಹಿರಿಯ ಅಧಿಕಾರಿಗಳಿಂದಲೂ ಸಿನ್ಹಾ ಮಾತಿಗೆ ಆಕ್ರೋಶ
ಮಿಲಿಟರಿ ಕಾರ್ಯಾಚರಣೆಗಳ ಮಾಜಿ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ ಅವರು ಸಿನ್ಹಾ ಮಾತಿಗೆ ವಿರೋಧ ವ್ಯಕ್ತ ಪಡಿಸಿ ಟ್ವೀಟಿಸಿದ್ದಾರೆ.
ಇದು ಸಂವೇದನರಹಿತ ಮತ್ತು ದುರದೃಷ್ಟಕರ. ಅವರು ಎಂದಿಗೂ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿರಲಿಲ್ಲ ಎಂದು ನನಗನಿಸುತ್ತದೆ. ಎಸಿ ಸ್ಟುಡಿಯೊದಲ್ಲಿ ಕುಳಿತು ಸೇನೆ ಉತ್ತಮ ಕೆಲಸ ಮತ್ತು ತ್ಯಾಗವನ್ನು ಇಲ್ಲದಂತೆ ಮಾಡುವುದು ಸುಲಭ. ಅವರು ಪ್ರಸಿದ್ಧಿಗಾಗಿ ಅಸಂಬದ್ಧ ಹೇಳಿಕೆಗಳನ್ನುನೀಡುತ್ತಿರುತ್ತಾರೆ ಎಂದು ವಿನೋದ್ ಭಾಟಿಯಾ ಟ್ವೀಟಿಸಿದ್ದಾರೆ.
ಭಾಟಿಯಾ ಅವರ ಮಾತಿಗೆ ಸಹಮತಿ ಸೂಚಿಸಿದ ಮಾಜಿ ಲೆಫ್ಟಿನೆಂಟ್ ಜನರಲ್ ಸಯ್ಯದ್ ಅಟಾ ಹಸನೈನ್ ಸಿನ್ಹಾ ಅವರನ್ನುಲೂಸ್ ಮಿಸೈಲ್ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.