ADVERTISEMENT

ಭಾರತದಲ್ಲಿ ವಾಟ್ಸ್ಆ್ಯಪ್‌ ಪೇಮೆಂಟ್‌ ಸೇವೆ ವಿಸ್ತರಣೆಗೆ ಸಿದ್ಧತೆ

ಪಿಟಿಐ
Published 20 ಸೆಪ್ಟೆಂಬರ್ 2023, 15:56 IST
Last Updated 20 ಸೆಪ್ಟೆಂಬರ್ 2023, 15:56 IST
ವಾಟ್ಸ್‌ಆ್ಯಪ್‌
ವಾಟ್ಸ್‌ಆ್ಯಪ್‌    

ಮುಂಬೈ: ಭಾರತದಲ್ಲಿ ವಾಟ್ಸ್‌ಆ್ಯಪ್‌ ಪಾವತಿ ಸೇವೆಗಳು ವಿಸ್ತರಿಸಲು ಕಂಪನಿ ಮುಂದಾಗಿದೆ. ವಾಟ್ಸ್‌ಆ್ಯಪ್‌ ಮೂಲಕ ಯಾವುದೇ ಯುಪಿಐ ಆ್ಯಪ್‌, ಡೆಬಿಟ್‌ ಅಥವಾ ಕ್ರೆಡಿಟ್ ಕಾರ್ಡ್‌ ಬಳಸಿ ಪಾವತಿ ಮಾಡುವ ಆಯ್ಕೆಯನ್ನು ನೀಡಲು ಉದ್ದೇಶಿಸಿದೆ.

ಪಾವತಿಯನ್ನು ಮೆಸೇಜ್‌ ಕಳುಹಿಸುವಷ್ಟೇ ಸುಲಭವಾಗಿಸುವ ನಿಟ್ಟಿನಲ್ಲಿ ರೇಜರ್‌ಪೇ ಮತ್ತು ಪೇಯು ಜೊತೆಗೂಡಿ ಕೆಲಸ ಮಾಡುತ್ತಿರುವುದಾಗಿ ಪೇಟಿಎಂ ತಿಳಿಸಿದೆ. 

ವಾಟ್ಸ್‌ಆ್ಯಪ್‌ ಬಿಸಿನೆಸ್‌ ಪ್ಲಾಟ್‌ಫಾರಂ ಮೂಲಕ ವಸ್ತುಗಳನ್ನು ಕಾರ್ಟ್‌ಗೆ ಸೇರಿಸಿ ತಮ್ಮಿಷ್ಟದ ಪಾವತಿ ಆಯ್ಕೆಯನ್ನು ಬಳಸಿ ಹಣ ಪಾವತಿಸಬಹುದು. ವಾಟ್ಸ್‌ಆ್ಯಪ್‌ ಪೇ ಅಥವಾ ಯುಪಿಐ ಆ್ಯಪ್‌ಗಳು, ಡೆಬಿಟ್‌ ಕಾರ್ಡ್‌ ಒಳಗೊಂಡು ಇತರ ಯಾವುದೇ ಪಾವತಿ ಮಾರ್ಗಗಳ ಮೂಲಕ ಹಣ ಪಾವತಿಸಬಹುದು. ಹಣ ಪಾವತಿಸಲು ವೆಬ್‌ಸೈಟ್‌ಗೆ ಹೋಗುವ, ಇನ್ನೊಂದು ಆ್ಯಪ್‌ ತೆರೆಯುವ ಅಗತ್ಯ ಇಲ್ಲ ಎಂದು ಕಂಪನಿಯು ತಿಳಿಸಿದೆ.

ADVERTISEMENT

ವಾಟ್ಸ್‌ಆ್ಯಪ್‌ ಚಾಟ್‌ನಲ್ಲಿ ಇದ್ದುಕೊಂಡೇ ಗೂಗಲ್‌ ಪೇ ಮತ್ತು ಪೇಟೆಎಂ ಆಯ್ಕೆಯನ್ನು ಬಳಸಿ ಹಣ ವರ್ಗಾಯಿಸಬಹುದು. ಇದಕ್ಕಾಗಿ ಗೂಗಲ್‌ ಪೇ ಮತ್ತು ಪೇಟಿಎಂ ಆ್ಯಪ್‌ಗೆ ಹೋಗುವ ಅಗತ್ಯ ಇಲ್ಲ ಎಂದು ಹೇಳಿದೆ. ಈ ಆಯ್ಕೆಗಳು ಸಿಂಗಪುರ ಮತ್ತು ಬ್ರೆಜಿಲ್‌ನಲ್ಲಿ ಈಗಾಗಲೇ ಸಣ್ಣ ಉದ್ದಿಮೆಗಳಿಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.