ಮೆಟಾ ಒಡೆತನದ, ಫೋಟೊ ಶೇರಿಂಗ್ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್, ಗುರುವಾರ ಬಹಳಷ್ಟು ಮಂದಿ ಬಳಕೆದಾರರಿಗೆ ಲಭ್ಯವಾಗದೇ ಇದ್ದ ಕುರಿತು ಸಂಸ್ಥೆ ಪ್ರತಿಕ್ರಿಯಿಸಿದ್ದು, ಸಮಸ್ಯೆಯನ್ನು ಸರಿಪಡಿಸಲಾಗಿದೆ ಎಂದಿದೆ.
ಇನ್‌ಸ್ಟಾಗ್ರಾಮ್ ಬಳಸಲು ಸಾಧ್ಯವಾಗುತ್ತಿಲ್ಲ ಎಂದು 6000ಕ್ಕೂ ಹೆಚ್ಚಿನ ಬಳಕೆದಾರರು ಗುರುವಾರ ಡೌನ್‌ಡಿಟೆಕ್ಟರ್.ಕಾಂನಲ್ಲಿ ವರದಿ ಮಾಡಿದ್ದರು.
ಜತೆಗೆ, ಬಹಳಷ್ಟು ಮಂದಿ ಟ್ವಿಟರ್ ಮೂಲಕವೂ ಇನ್‌ಸ್ಟಾಗ್ರಾಮ್ ಸಮಸ್ಯೆಯ ಕುರಿತು ಟ್ವೀಟ್ ಮಾಡಿದ್ದರು.
ಇನ್‌ಸ್ಟಾಗ್ರಾಮ್ ಇಮೇಜ್ ಪೋಸ್ಟ್ ಮತ್ತು ಸ್ಟೋರೀಸ್ ಪೋಸ್ಟ್ ಮಾಡುವಲ್ಲಿ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಟಾ ಕಂಪನಿ, ತೊಂದರೆಯಾಗಿರುವ ಬಗ್ಗೆ ನಮಗೆ ತಿಳಿದಿದೆ. ಅಡಚಣೆಗಾಗಿ ವಿಷಾದಿಸುತ್ತೇವೆ. ನಮ್ಮ ತಂತ್ರಜ್ಞರ ತಂಡ ಸಮಸ್ಯೆಯನ್ನು ಸರಿಪಡಿಸಿದೆ. ಇನ್‌ಸ್ಟಾಗ್ರಾಮ್ ಎಲ್ಲರ ಬಳಕೆಗೆ ಲಭ್ಯವಾಗುತ್ತಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.