ಮುಂಬೈ:ಮಹಾರಾಷ್ಟ್ರಕ್ಕೆ ಮುಂಗಾರು ಆಗಮಿಸಿದ್ದು, ಶುಕ್ರವಾರ ಬೆಳಗ್ಗಿನಿಂದ ಸುರಿದ ಮಳೆಯಿಂದ ಮುಂಬೈ ನಗರ ಜಲಾವೃತವಾಗಿದೆ.
ಮಳೆಯಿಂದಾಗಿ ರಸ್ತೆಗಳೆಲ್ಲವೂ ಜಲಾವೃತವಾಗಿದ್ದು ವಿದ್ಯುತ್ ಆಘಾತದಿಂದ ಮೂರು ಮಂದಿ ಸಾವಿಗೀಡಾಗಿದ್ದಾರೆ.
ಅಲ್ಲಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಕಾದ ಇಳೆಗೆ ತಂಪೆರೆದ ಮಳೆಗೆ ಕೆಲವರು ಸ್ವಾಗತ ನೀಡಿದರೆ, ನೆಟ್ಟಿಗರು ಮೀಮ್, ಟ್ರೋಲ್ ಮೂಲಕ ನಗು ಮೂಡಿಸಿದ್ದಾರೆ.
ಮಳೆಯೆಂದಾಗ ಕೆಲವರು ಚಾಯ- ಪಕೋಡಾ ನೆನಪಿಸಿಕೊಂಡರೆ ಇನ್ನು ಕೆಲವರು ಮುಂಬೈ ಮಹಾನಗರದಲ್ಲಿರುವಆಟೋ ಟ್ಯಾಕ್ಸಿ ಚಾಲಕರಿಗೆ 'ಸುಗ್ಗಿ'ಎಂದಿದ್ದಾರೆ.ಜೂನ್ ತಿಂಗಳಲ್ಲಿ ಮಳೆ ಬರುತ್ತದೆ ಎಂದು ಗೊತ್ತಿದ್ದರೂ ರಸ್ತೆ ಗುಂಡಿಗಳನ್ನು ಮುಚ್ಚದೆ ಜನರ ಸಮಸ್ಯೆಗೆ ಕಾರಣವಾದ ಮುಂಬೈ ಮಹಾನಗರ ಪಾಲಿಕೆ ವಿರುದ್ಧವೂ ಕೆಲವರು ಕಿಡಿ ಕಾರಿದ್ದಾರೆ.
ಮುಂಬೈ ಮಳೆ ಬಗ್ಗೆ ನಗು ತರಿಸುವ ಕೆಲವೊಂದು ಟ್ವೀಟ್‌ಗಳು ಇಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.