ಸ್ಯಾನ್ ಫ್ರಾನ್ಸಿಸ್ಕೊ (ರಾಯಿಟರ್ಸ್/ಎಪಿ): ಟ್ವಿಟರ್ ದಿವಾಳಿಯಾಗುವ ಸಾಧ್ಯತೆ ಇದೆ ಎಂದು ಕಂಪನಿಯ ಮಾಲೀಕ ಇಲಾನ್ ಮಸ್ಕ್ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಹಿರಿಯ ಉದ್ಯೋಗಿಗಳು ಕಂಪನಿಯಿಂದ ಹೊರನಡೆದ ಬೆನ್ನಲ್ಲೇ ಮಸ್ಕ್ ಈ ಎಚ್ಚರಿಕೆ ನೀಡಿದ್ದಾರೆ. ಜಾಹೀರಾತು ವರಮಾನ ಕುಸಿಯುತ್ತಿದ್ದು, ಅದನ್ನು ಸರಿದೂಗಿಸಲು ಚಂದಾದಾರಿಕೆ ವರಮಾನ ಹೆಚ್ಚಳ ಆಗದೇ ಇದ್ದರೆ ಮುಂಬರುವ ಆರ್ಥಿಕ ಕುಸಿತದಿಂದ ಕಂಪನಿಗೆ ಉಳಿದುಕೊಳ್ಳುವುದು ಕಷ್ಟವಾಗಲಿದೆ ಎಂದು ಉದ್ಯೋಗಿಗಳಿಗೆ ಬರೆದಿರುವ ಇ–ಮೇಲ್‌ನಲ್ಲಿ ತಿಳಿಸಿದ್ದಾರೆ.
ಮುಖ್ಯ ಮಾಹಿತಿ ಸುರಕ್ಷತಾ ಅಧಿಕಾರಿ ಲಿಯಾ ಕಿಸ್ನರ್ ಸೇರಿದಂತೆ ಉನ್ನತ ಹುದ್ದೆಯಲ್ಲಿದ್ದವರು ಕಂಪನಿಗೆ ರಾಜೀನಾಮೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.