ನವದೆಹಲಿ: ಕೇಂದ್ರ ಸರ್ಕಾರವು ಟ್ವಿಟರ್ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವುದನ್ನು ಬಯಸುವುದಿಲ್ಲ. ಆದರೆ ಕಾನೂನುಗಳ ಪಾಲನೆಯಾಗಬೇಕು ಎಂದು ಕೇಂದ್ರ ಸಂವಹನ, ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಹೊಸ ನಿಯಮಗಳನ್ನು ಪಾಲಿಸದ ಕಾರಣ ಟ್ವಿಟರ್ ಸಂಸ್ಥೆಯು ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರವಿಶಂಕರ್ ಪ್ರಸಾದ್, ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಸರ್ಕಾರದ ಅರ್ಧದಷ್ಟು ಮಂದಿ ಟ್ವಿಟರ್ ಖಾತೆಯನ್ನು ಹೊಂದಿದ್ದಾರೆ. ಅದು ನಾವೆಷ್ಟು ಪಾರದರ್ಶಕವಾಗಿದ್ದೇವೆ ಎಂಬುದನ್ನು ತೋರಿಸುತ್ತದೆ. ಆದರೆ ನಿಯಮಗಳ ಪಾಲನೆಯಾಗಬೇಕು ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣ ಟ್ವಿಟರ್ 'ಮಧ್ಯವರ್ತಿ ಮಾಧ್ಯಮ ಸ್ಥಾನಮಾನ'ವನ್ನು ಕಳೆದುಕೊಂಡಿದೆ. ಸಾರ್ವಜನಿಕರ ಹಿತರಕ್ಷಣೆಗಾಗಿ ಹೊಸ ನಿಮಯಗಳನ್ನು ರೂಪಿಸಲಾಗಿದೆ ಎಂದು ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ವ್ಯಾಟ್ಸ್‌ಆ್ಯಪ್‌ನ ಎಲ್ಲ ಬಳಕೆದಾರರು ಅದನ್ನು ಬಳಕೆ ಮಾಡುವುದು ಮುಂದುವರಿಸಬಹುದು. ಹತ್ಯೆ, ಗಲಭೆ, ಮಹಿಳೆಯರ ನಗ್ನತೆ, ಲೈಂಗಿಕ ಶೋಷಣೆ ಇತ್ಯಾದಿ ವಿಷಯಗಳು ವೈರಲ್ ಆದಾಗ ಅದರ ಮೂಲ ಯಾವುದು ಎಂಬುದನ್ನು ತಿಳಿಯಲು ನೀವು ಬಯಸುವೀರಿ. ವೈರಲ್ ಸಂದೇಶಗಳನ್ನು ಅಪಾಯವನ್ನುಂಟು ಮಾಡುತ್ತಿದ್ದರೆ ಅದನ್ನು ಭಾರತದಲ್ಲಿ ಯಾರು ಹರಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ಬಯಸುತ್ತೇವೆ. ಇವೆಲ್ಲವೂ ಸಾರ್ವಜನಿಕ ಹಿತಾಸಕ್ತಿಗಾಗಿ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.