ADVERTISEMENT

ಮೋದಿ, ಒಬಾಮ, ಬೈಡನ್ ರ್‍ಯಾಂಪ್‌ ವಾಕ್ ಮಾಡಿದರೆ ಹೇಗಿರುತ್ತೆ? AI ವಿಡಿಯೊ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2024, 6:41 IST
Last Updated 22 ಜುಲೈ 2024, 6:41 IST
<div class="paragraphs"><p>ಇಲಾನ್‌ ಮಸ್ಕ್‌ ಹಂಚಿಕೊಂಡಿರುವ ಎಐ ವಿಡಿಯೊ ದೃಶ್ಯ</p></div>

ಇಲಾನ್‌ ಮಸ್ಕ್‌ ಹಂಚಿಕೊಂಡಿರುವ ಎಐ ವಿಡಿಯೊ ದೃಶ್ಯ

   

ವಾಷಿಂಗ್ಟನ್‌: ಫ್ಯಾಷನ್‌ ಶೋನಲ್ಲಿ ಜಾಗತಿಕ ನಾಯಕರು ಹೆಜ್ಜೆ ಹಾಕಿದರೆ ಯಾವ ರೀತಿ ಇರುತ್ತದೆ ಎನ್ನುವ ಬಗ್ಗೆ ಟೆಕ್‌ ಬಿಲಿಯನೆರ್‌ ಇಲಾನ್‌ ಮಸ್ಕ್‌ ಎಕ್ಸ್‌ನಲ್ಲಿ ಎಐ ವಿಡಿಯೊ ಹಂಚಿಕೊಂಡಿದ್ದಾರೆ. 

ವರ್ಚುವಲ್‌ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಡೊನಾಲ್ಡ್‌ ಟ್ರಂಪ್‌, ಜೋ ಬೈಡನ್‌, ಬರಾಕ್‌ ಒಬಾಮ ಸೇರಿದಂತೆ ಹಲವು ನಾಯಕರು ರ್‍ಯಾಂಪ್‌ ವಾಕ್‌ ಮಾಡಿದ ಎಐ ವಿಡಿಯೊ ಇದಾಗಿದೆ. 

ADVERTISEMENT

ಕೃತಕ ಬುದ್ದಿಮತ್ತೆ ಮೂಲಕ ಪ್ರತಿಯೊಬ್ಬರನ್ನು ವಿಭಿನ್ನ ಉಡುಗೆಯಲ್ಲಿ ಕಾಣುವಂತೆ ಮಾಡಲಾಗಿದ್ದು, ಸ್ವತಃ ಮಸ್ಕ್‌ ತಮ್ಮನ್ನು ಟೆಸ್ಲಾ ಲೊಗೊ ಇರುವ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. 

ಬಣ್ಣ ಬಣ್ಣದ ಉಡುಗೆಯಲ್ಲಿ ಪ್ರಧಾನಿ ಮೋದಿಯವರು ಕಾಣುವಂತೆ ಮಾಡಿದ್ದು, ಟ್ರಂಪ್‌ ಅವರನ್ನು ಕೈದಿಯಂತೆ, ಬೈಡನ್ ಅವರು ಗಾಲಿ ಕುರ್ಚಿಯ ಮೇಲೆ ಕುಳಿತ ಮಿಲಿಟರಿ ವ್ಯಕ್ತಿಯಂತೆ, ಪುಟಿನ್‌ ಅವರನ್ನು ಕಾಮನ ಬಿಲ್ಲಿನಂತೆ ಕಾಣುವ ಬಣ್ಣದ ಉಡುಗೆಯಲ್ಲಿ ತೋರಿಸಲಾಗಿದೆ. ಇವರ ಜತೆ ಉತ್ತರ ಕೊರಿಯಾ ನಾಯಕ ಕಿಮ್‌, ಫ್ರಾನ್ಸ್‌ನ ಪೋಪ್‌ ಸೇರಿದಂತೆ ಹಲವರು ರ್‍ಯಾಂಪ್‌ ವಾಕ್‌ ಮಾಡುವ ಎಐ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೊ ಹಂಚಿಕೊಂಡಿರುವ ಇಲಾನ್‌ ಮಸ್ಕ್‌ ‘ಇದು ಎಐ ಫ್ಯಾಷನ್‌ ಶೋನ ಸಮಯ’ ಎಂದು ಬರೆದುಕೊಂಡಿದ್ದಾರೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.