ಚೆನ್ನೈ: ಭಾರತೀಯ ಚಿತ್ರರಂಗದ ಅತ್ಯುನ್ನತ ‘ದಾದಾಸಾಹೇಬ್ ಪಾಲ್ಕೆ’ 2020ನೇ ಸಾಲಿನಪ್ರಶಸ್ತಿಗೆ ಆಯ್ಕೆಯಾಗಿರುವ ಖ್ಯಾತ ನಟ ರಜನಿಕಾಂತ್ ಸೋಮವಾರ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಈ ಸಂದರ್ಭದಲ್ಲೇ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ವಿಶಾಗನ್ ಅವರು ಧ್ವನಿ ಆಧಾರಿತ ಸಾಮಾಜಿಕ ಮಾಧ್ಯಮವೊಂದನ್ನು ಆರಂಭಿಸಲಿದ್ದಾರೆ.
‘ಎರಡು ವಿಶೇಷ ಸನ್ನಿವೇಶಗಳು ಘಟಿಸುವುದರಿಂದ ನಾಳೆ ನನಗೆ ಮಹತ್ವದ ಸಂದರ್ಭವಾಗಿದೆ. ಜನರ ಪ್ರೀತಿ ಮತ್ತು ಬೆಂಬಲ ದೊರೆತಿದ್ದರಿಂದ ಭಾರತ ಸರ್ಕಾರ ನನಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ’ ಎಂದು ಅವರು ಭಾನುವಾರ ದೆಹಲಿಗೆ ತೆರಳಿದ ನಂತರ ಹೇಳಿಕೆಯೊಂದರಲ್ಲಿ ತಿಳಿಸಿದರು.
‘ಈ ದಿನ ನನಗೆ ಮತ್ತೊಂದು ಕಾರಣಕ್ಕೆ ಮಹತ್ವದ್ದಾಗಿದೆ. ಏಕೆಂದರೆ ಮಗಳು ಸೌಂದರ್ಯ ತನ್ನ ಸ್ವಂತ ಪ್ರಯತ್ನದಿಂದ ಹೂಟ್(Hoote) ಎಂಬ ಜನರಿಗೆ ಉಪಯುಕ್ತ ಆ್ಯಪ್ ತಯಾರಿಸಿದ್ದಾರೆ. ಇದು ದೇಶದ ಮೊದಲ ಧ್ವನಿ ಆಧರಿತ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದ್ದು ಸೋಮವಾರ ಅನಾವರಣಗೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.