ADVERTISEMENT

ಸಿದ್ದರಾಮಯ್ಯ ಹೇಳಿಕೆಗೆ ಖಂಡನೆ: ಟ್ವಿಟರ್‌ನಲ್ಲಿ ಸೆಲ್ಫಿ ವಿತ್ ತಿಲಕ್ ಟ್ರೆಂಡಿಂಗ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 12:00 IST
Last Updated 6 ಮಾರ್ಚ್ 2019, 12:00 IST
   

ಬೆಂಗಳೂರು:'ತಿಲಕ ಇಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತದೆ' ಎಂಬ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಟ್ಟಿಟ್ಟರ್‌ನಲ್ಲಿ ನೆಟಿಜನ್‍ಗಳು #SelfieWithTilak ಹ್ಯಾಶ್‍ಟ್ಯಾಗ್ ಬಳಸಿ ತಿಲಕ ಧರಿಸಿದಫೋಟೊ ಶೇರ್ ಮಾಡುತ್ತಿದ್ದಾರೆ.

ಇದೀಗ #SelfieWithTilak ಟ್ರೆಂಡ್ ಆಗುತ್ತಿದ್ದು, ತಿಲಕ ರಾಜಕೀಯಕ್ಕೆ ಸೇರಿದ್ದಲ್ಲ. ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕ. ನಾನು ಈ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಸಂಸದೆಶೋಭಾ ಕರಂದ್ಲಾಜೆ ಟ್ವೀಟಿಸಿದ್ದಾರೆ.

ಸಿದ್ದರಾಮಯ್ಯ ಅವರು ತಿಲಕ ಇಟ್ಟುಕೊಂಡಿರುವ ಫೋಟೊ ಶೇರ್ ಮಾಡಿರುವ ಬಿಜೆಪಿ ನಾಯಕ ಸಿ.ಟಿ. ರವಿ ಸಿದ್ದರಾಮಯ್ಯನರೇ ನೀವು ಹಿಂದೂಗಳನ್ನು ಇಷ್ಟೊಂದು ದ್ವೇಷಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಏನಿದು ತಿಲಕ ಚರ್ಚೆ?

ಮಂಗಳವಾರ ಬಾದಾಮಿಯ ಕೆಂದೂರ ಕೆರೆಯ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ನೀಡುವ ಸಮಯದಲ್ಲಿ ನನಗೆ ತಿಲಕ ಇಟ್ಟುಕೊಂಡವರನ್ನು ಕಂಡರೆ ಭಯವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ಬಗ್ಗೆ ಟೀಕೆಗಳು ಕೇಳಿ ಬರುತ್ತಿದ್ದಂತೆ ಟ್ವೀಟಿಸಿದ ಸಿದ್ದರಾಮಯ್ಯ ಹೌದು, ತಿಲಕ ಇಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತೆ ಎಂದು ಹೇಳಿರುವುದು ನಿಜ. ಬಹಳಷ್ಟು ಕ್ರಿಮಿನಲ್‌ಗಳು ತಮ್ಮ ರಕ್ಷಣೆಗಾಗಿ ತಿಲಕ ಧರಿಸಿ ಮೆರೆದಾಡುತ್ತಿದ್ದಾರೆ. ಇವರು ಧರ್ಮದ್ರೋಹಿಗಳು ಮಾತ್ರವಲ್ಲ, ಸಮಾಜ ದ್ರೋಹಿಗಳು ಕೂಡಾ. ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಹೇಳಿದ್ದು. ಏನಿವಾಗ? ಎಂದು ಪ್ರಶ್ನಿಸಿ ಸರಣಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.