ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವುದನ್ನು ತಡೆಯಲು ಕರ್ಮ ಸಮಿತಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆ ವೇಳೆಹಿಂಸಾಚಾರ ನಡೆಸಿದ ಆರೋಪದಲ್ಲಿ ಶಬರಿಮಲೆಕರ್ಮ ಸಮಿತಿಯ ಹಲವಾರು ಕಾರ್ಯಕರ್ತರು ಜೈಲಿನಲ್ಲಿದ್ದಾರೆ.ಜೈಲಿನಲ್ಲಿರುವ ಕಾರ್ಯಕರ್ತರನ್ನು ಬಂಧಮುಕ್ತಗೊಳಿಸುವುದಕ್ಕಾಗಿ ಕರ್ಮ ಸಮಿತಿ ಅಧ್ಯಕ್ಷೆ ಕೆ.ಪಿ.ಶಶಿಕಲಾ ಹೊಸ ಚಾಲೆಂಜ್‍ಗೆ ಆಹ್ವಾನ ನೀಡಿದ್ದಾರೆ.
ಪ್ರತಿಭಟನೆ, ಹಿಂಸಾಚಾರದ ಆರೋಪದಲ್ಲಿ ಕರ್ಮ ಸಮಿತಿಯ 1000ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಜೈಲಿನಲ್ಲಿದ್ದಾರೆ.ಅವರನ್ನು ಬಂಧಮುಕ್ತಗೊಳಿಸಲು ಮತ್ತು ಅವರ ಕುಟುಂಬಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ₹100 ಸಂಭಾವನೆ ನೀಡಬೇಕು. ₹100 ಸಂಭಾವನೆ ನೀಡುವುದೇ ಶತಂ ಸಮರ್ಪಯಾಮಿ ಚಾಲೆಂಜ್. ನೀವು ಈ ರೀತಿ ಸಂಭಾವನೆ ನೀಡಿದಾಗ ಲಭಿಸುವ ರಸೀದಿಯ ಸ್ಕ್ರೀನ್ ಶಾಟ್ ಶೇರ್ ಮಾಡಿ ಚಾಲೆಂಜ್ ಮುಂದುವರಿಸಿ ಎಂದು ಶಶಿಕಲಾ ವಿಡಿಯೊ ಮೂಲಕ ವಿನಂತಿಸಿದ್ದಾರೆ.
ಶತಂ ಸಮರ್ಪಯಾಮಿ ಟ್ರೋಲ್
ಶಬರಿಮಲೆ ಕರ್ಮ ಸಮಿತಿ ಶತಂ ಸಮರ್ಪಯಾಮಿ ಎಂದು ಸಂಭಾವನೆ ನೀಡಲು ವಿನಂತಿ ಮಾಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.