ADVERTISEMENT

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌ ಸಮಸ್ಯೆ ನಿವಾರಣೆ: ಸಹಜ ಸ್ಥಿತಿಗೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 1:56 IST
Last Updated 4 ಜುಲೈ 2019, 1:56 IST
   

ನವದೆಹಲಿ: ಸಾಮಾಜಿಕ ತಾಣಗಳ ಬಳಕೆದಾರರು ಬುಧವಾರ ರಾತ್ರಿ ತಾಂತ್ರಿಕ ಸಮಸ್ಯೆ ಎದುರಿಸಿದರು. ಫೊಟೊ, ವಿಡಿಯೊಗಳು ಅಪ್ಲೋಡ್‌, ಡೌನ್‌ಲೋಡ್‌ ಆಗದೇ ಕಿರಿಕಿರಿ ಅನುಭವಿಸಿದರು. ಸದ್ಯ ಈ ಸಮಸ್ಯೆ ಅಂತ್ಯಗೊಂಡಿದ್ದು, ಎಲ್ಲತಾಣಗಳು ಸಹಜ ಸ್ಥಿತಿಗೆ ಮರಳಿವೆ.

ಫೇಸ್‌ಬುಕ್‌, ವಾಟ್ಸಾಪ್‌, ಟ್ವಿಟರ್‌, ಇನ್‌ಸ್ಟಾಗ್ರಾಂ ಬಳಕೆದಾರರು ಜಗತ್ತಿನಾದ್ಯಂತ ಬುಧವಾರ ಸಮಸ್ಯೆ ಎದುರಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ ಟ್ವಿಟರ್‌ನಲ್ಲಿ ಸಂದೇಶಗಳನ್ನು ಹಂಚಿಕೊಂಡ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದವು. ಸೇವೆಯಲ್ಲಾದ ಸಮಸ್ಯೆ ಬಳಕೆದಾರರ ಕ್ಷಮೆ ಕೋರಿದವು. ಗುರುವಾರ ಬೆಳಗ್ಗೆ 5ರ ಹೊತ್ತಿಗೆಸಂದೇಶಗಳನ್ನು ಹಂಚಿಕೊಂಡಿರುವ ಸಾಮಾಜಿಕ ತಾಣಗಳು,ಸಮಸ್ಯೆ ಬಗೆಹರಿದಿರುವುದಾಗಿ ತಿಳಿಸಿವೆ. ಇದರ ಜತೆಗೆ ಗ್ರಾಯಕರು ಎದುರಿಸುತ್ತಿದ್ದ ಸಮಸ್ಯೆ ಅಂತ್ಯವಾಗಿದ್ದು,ಎಂದಿನಂತೇ ಎಲ್ಲವೂಕಾರ್ಯ ಕಾರ್ಯನಿರ್ವಹಿಸುತ್ತಿವೆ.

ಆದರೆ,ಟ್ವಿಟರ್‌ ಮಾತ್ರ ಕೆಲ ವರ್ಗದ ಬಳಕೆದಾರರಿಗೆ ಸಮಸ್ಯೆಯಾಗುವ ಮುನ್ಸೂಚನೆ ನೀಡಿದೆ. ‘ಸಮಸ್ಯೆ 100%ರಷ್ಟು ಸರಿಹೋಗಿದೆ. ಆದರೆ, ಕೆಲ ವರ್ಗದಬಳಕೆದಾರರಿಗೆ ಸಣ್ಣ ಪ್ರಮಾಣದ ತೊಂದರೆಯಾಗುವ ಸಾಧ್ಯತೆಗಳಿವೆ,’ ಎಂದು ಅದು ಟ್ವೀಟ್‌ನಲ್ಲಿ ತಿಳಿಸಿದೆ. ಬುಧವಾರ ಕಾಣಿಸಿಕೊಂಡ ಸಮಸ್ಯೆ ಸಣ್ಣದು ಎಂದಿರುವ ಟ್ವಿಟರ್‌ ಅದನ್ನು ಬಹಿರಂಗವಾಗಿ ವಿವರಿಸಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.