ತಿರುವನಂತಪುರಂ: ಸೇನಾ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರವಾಹ ಪೀಡಿತ ಪ್ರದೇಶಗಳಲ್ಲೊಂದಾದಚೆಂಗನ್ನೂರ್ ನಲ್ಲಿ ರಕ್ಷಣಾ ಕಾರ್ಯ ನಡೆಸಲು ಬಿಡುವುದಿಲ್ಲ ಎಂದು ಹೇಳುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
2 ನಿಮಿಷ 30 ಸೆಕೆಂಡ್ಸ್ ಅವಧಿಯ ಈ ವಿಡಿಯೊ ಶನಿವಾರ ಭಾರತೀಯ ಮಹಿಳಾ ಮೋರ್ಚಾ ತಲಶ್ಶೇರಿ ಮಂಡಲ ತಮ್ಮ ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿತ್ತು.ಆದರೆ ಈ ವಿಡಿಯೊ ನಕಲಿ ಎಂದು ಭಾರತೀಯ ಸೇನೆಯ ಹೆಚ್ಚುವರಿ ಪ್ರಧಾನ ನಿರ್ದೇಶಕ- ಸಾರ್ವಜನಿಕ ಮಾಹಿತಿಟ್ವೀಟ್ ಮಾಡಿದೆ.
ವಿಡಿಯೊದಲ್ಲಿರುವವ್ಯಕ್ತಿ ಯಾರು ಎಂಬುದು ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಈ ವಿಡಿಯೊ ಈಗಾಗಲೇ 27,000 ಕ್ಕಿಂತ ಹೆಚ್ಚು ಬಾರಿ ಶೇರ್ ಆಗಿದೆ.
ವಿಡಿಯೊದಲ್ಲಿ ಏನಿದೆ?
ನಾನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನುದ್ದೇಶಿಸಿ ಮಾತನಾಡುತ್ತಿದ್ದೇನೆ.ನಿಮಗೆ ಭಾರತೀಯ ಸೇನೆ ಮೇಲೆ ಅಷ್ಟೊಂದು ವಿರೋಧ ಯಾಕೆ? ನಿಮ್ಮ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರು ಸೇನೆ ರಾಜ್ಯಕ್ಕೆ ಬರುವುದು ಬೇಡ ಎಂದು ಹೇಳುತ್ತಿದ್ದಾರೆ.ಚೆಂಗನ್ನೂರಿನಲ್ಲಿ ಸಾವಿರಾರು ಮಂದಿ ಸಿಲುಕಿದ್ದಾರೆ.ನಮಗೆ ನಮ್ಮ ಕೆಲಸ ಮಾಡಲು ಬಿಡಿ. ನಾವು ನಿಮ್ಮ ರಾಜ್ಯವನ್ನು ಅತಿಕ್ರಮಿಸಲಾರೆವು. ನೀವು ಭಯ ಪಡಬೇಡಿ, ನಿಮಗೆ ನಿಮ್ಮ ಜನರ ಬಗ್ಗೆ ಕಾಳಜಿ ಇಲ್ಲವೇ? ದೇಶದಾದ್ಯಂತ ಇಂಥದ್ದೇ ರಕ್ಷಣಾ ಕಾರ್ಯಗಳನ್ನು ನಾವು ಮಾಡಿದ್ದೇವೆ. ಇದು ನಮಗೆ ಹೊಸತೇನೂ ಅಲ್ಲ. ನಮ್ಮನ್ನು ಚೆಂಗನ್ನೂರಿಗೆ ಬರಲು ಬಿಡಿ, ನಮಗೆ ನಮ್ಮ ಕೆಲಸ ಮಾಡಲು ಬಿಡಿ ಎಂದು ನಾನು ಬೇಡಿಕೊಳ್ಳುತ್ತಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.