ನವದೆಹಲಿ: ಫೇಸ್‌ಬುಕ್ ಹಾಗೂ ಗೂಗಲ್ ಕಂಪನಿಗಳು ಹೊಸ ಐಟಿ ನಿಯಮಗಳ ಅನುಸಾರ ಕುಂದುಕೊರತೆ ಅಧಿಕಾರಿಗಳನ್ನು ನೇಮಕ ಮಾಡಿರುವ ಕುರಿತ ವಿವರಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿವೆ.
ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರಚಿಸಿ, ಅವುಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಬೆನ್ನಲ್ಲೇ ಕಂಪನಿಗಳು ಮಾಹಿತಿಯನ್ನು ಅಪ್‌ಡೇಟ್ ಮಾಡಿವೆ.
ಗೂಗಲ್ ಸಂಸ್ಥೆ ಜೋ ಗ್ರೆಯರ್ ಎಂಬುವವರನ್ನು ಕುಂದುಕೊರತೆ ಅಧಿಕಾರಿಯನ್ನಾಗಿ ನೇಮಕ ಮಾಡಿದೆ. ಅಮೆರಿಕದ ಮೌಂಟೇನ್ ವ್ಯೂನಲ್ಲಿರುವ ಅವರ ವಿಳಾಸವನ್ನು ಕಂಪನಿಯ ‘ಕಾಂಟ್ಯಾಕ್ಟ್ ಅಸ್’ ಪುಟದಲ್ಲಿ ಪ್ರಕಟಿಸಲಾಗಿದೆ. ಯೂಟ್ಯೂಬ್‌ಗೆ ಸಂಬಂಧಿಸಿದ ಕುಂದುಕೊರತೆ ಸಲ್ಲಿಸುವ ವಿಧಾನದ ವಿವರಗಳನ್ನು ಸಹ ನೀಡಲಾಗಿದೆ.
ವಾಟ್ಸ್‌ಆ್ಯಪ್ ಸಹ ಅನುಸರಣಾ ವರದಿಯನ್ನು ಅಪ್‌ಲೋಡ್ ಮಾಡಿದೆ. ಟ್ವಿಟರ್ ಮಾತ್ರ ಈ ಹೊಸ ನಿಯಮಗಳನ್ನು ಅಸುಸರಣೆ ಮಾಡಬೇಕಿದೆ ಎಂದು ಐಟಿ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.