ADVERTISEMENT

Telegram App: ಅತಿ ಹೆಚ್ಚು ಡೌನ್‌ಲೋಡ್ ಆದ 'ಟೆಲಿಗ್ರಾಂ', ಹೊಸ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2021, 13:05 IST
Last Updated 7 ಫೆಬ್ರುವರಿ 2021, 13:05 IST
ಟೆಲಿಗ್ರಾಂ ಆ್ಯಪ್
ಟೆಲಿಗ್ರಾಂ ಆ್ಯಪ್   

ಬೆಂಗಳೂರು: ಮೆಸೆಂಜರ್ ಸೇವೆ ಒದಗಿಸುವ ಟೆಲಿಗ್ರಾಂ ಆ್ಯಪ್, ಈ ಬಾರಿ ಗೂಗಲ್ ಪ್ಲೇ ಸ್ಟೋರ್ ಡೌನ್‌ಲೋಡ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದೆ. ಪ್ರತಿಸ್ಪರ್ಧಿ ವಾಟ್ಸ್ ಆ್ಯಪ್ ಪರಿಚಯಿಸಲು ಮುಂದಾಗಿದ್ದ ಖಾಸಗಿತನ ನೀತಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಟೆಲಿಗ್ರಾಂ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಸೆನ್ಸರ್ ಟವರ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜನವರಿ 2021ರಲ್ಲಿ ಟೆಲಿಗ್ರಾಂ 6.3 ಕೋಟಿಗೂ ಅಧಿಕ ಇನ್‌ಸ್ಟಾಲ್ ಕಂಡಿದೆ. ಇದು ಇದೇ ಅವಧಿಯಲ್ಲಿ ಕಳೆದ ವರ್ಷ ಇದ್ದ ಸಂಖ್ಯೆಗಿಂತ ನಾಲ್ಕು ಪಟ್ಟು ಹೆಚ್ಚು ಎನ್ನುವುದು ಗಮನಾರ್ಹ. 2020ರ ಡಿಸೆಂಬರ್‌ನಲ್ಲಿ ಟೆಲಿಗ್ರಾಂ ಅತಿ ಹೆಚ್ಚು ಡೌನ್‌ಲೋಡ್ ಆಗಿರುವ ಆ್ಯಪ್ ಪೈಕಿ 9ನೇ ಸ್ಥಾನದಲ್ಲಿತ್ತು.

ವರದಿ ಪ್ರಕಾರ, ಒಟ್ಟಾರೆ ಡೌನ್‌ಲೋಡ್ ಪೈಕಿ, ಶೇ 24 ಪಾಲು ಭಾರತದ್ದಾಗಿದ್ದರೆ, ಶೇ 10 ಪಾಲು ಇಂಡೋನೇಷ್ಯಾದ್ದಾಗಿದೆ. ಅಲ್ಲದೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕೂಡ ಗರಿಷ್ಠ ಡೌನ್‌ಲೋಡ್ ಕಂಡಿರುವ ಟಾಪ್ 10 ಪಟ್ಟಿಯಲ್ಲಿ ಟೆಲಿಗ್ರಾಂ ಮುಂಚೂಣಿಯಲ್ಲಿದೆ.

ADVERTISEMENT

ಆ್ಯಪಲ್ ಆ್ಯಪ್ ‌ಸ್ಟೋರ್‌ನಲ್ಲೂ ಟೆಲಿಗ್ರಾಂ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ನಾಲ್ಕನೇ ಕ್ರಮಾಂಕದಲ್ಲಿದೆ.

ಫೇಸ್‌ಬುಕ್ ಒಡೆತನದ ವಾಟ್ಸ್ ಆ್ಯಪ್ ಜನವರಿಯಲ್ಲಿ ಹೊಸ ಅಪ್‌ಡೇಟ್ ಮೂಲಕ ಬಳಕೆದಾರರಿಗೆ ಖಾಸಗಿತನ ನೀತಿಯನ್ನು ಪರಿಚಯಿಸುವುದಾಗಿ ಹೇಳಿತ್ತು. ಅದಾದ ಬಳಿಕ ವಿವಾದ ಸೃಷ್ಟಿಯಗಿದ್ದು, ಕೇಂದ್ರ ಸರ್ಕಾರ ಕೂಡ ಪ್ರಸ್ತಾವಿತ ನೀತಿಯನ್ನು ಕೈಬಿಡುವಂತೆ ಕೇಳಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.