ADVERTISEMENT

TikTok | ನ್ಯೂಯಾರ್ಕ್ ಸಿಟಿ: ಸರ್ಕಾರಿ ಡಿವೈಸ್‌ಗಳಲ್ಲಿ ಟಿಕ್‌ಟಾಕ್‌ಗೆ ನಿಷೇಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಆಗಸ್ಟ್ 2023, 3:09 IST
Last Updated 17 ಆಗಸ್ಟ್ 2023, 3:09 IST
ಟಿಕ್‌ಟಾಕ್‌
ಟಿಕ್‌ಟಾಕ್‌   ಚಿತ್ರ ಕೃಪೆ: iStock

ನ್ಯೂಯಾರ್ಕ್: ಭ್ರದತೆಗೆ ಅಪಾಯದ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಸಿಟಿಯ ಸರ್ಕಾರಿ ಡಿವೈಸ್‌ಗಳಲ್ಲಿ ಕಿರು ವಿಡಿಯೊ ಹಂಚಿಕೊಳ್ಳುವ ಚೀನಾ ಮೂಲದ ಅಪ್ಲಿಕೇಷನ್ ಟಿಕ್‌ಟಾಕ್‌ ಅನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

ಚೀನಾದ ಸಂಸ್ಥೆ ಬೈಟ್‌ಡ್ಯಾನ್ಸ್ ಒಡೆತನದ ಟಿಕ್‌ಟಾಕ್‌ ಮೇಲೆ ಈಗಾಗಲೇ ಹಲವು ಪ್ರಾಂತ್ಯಗಳು ನಿರ್ಬಂಧವನ್ನು ಹೇರಿವೆ.

ADVERTISEMENT

ನ್ಯೂಯಾರ್ಕ್ ಸಿಟಿ ಸೈಬರ್ ಕಮಾಂಡ್ ಪರಿಶೀಲನೆಯ ಬಳಿಕ 150 ಮಿಲಿಯನ್ ಅಮೆರಿಕನ್ನರು ಬಳಸುತ್ತಿರುವ ಟಿಕ್‌ಟಾಕ್‌ ಭದ್ರತೆಗೆ ಅಪಾಯ ತರುತ್ತಿದೆ ಎಂಬುದನ್ನು ಪತ್ತೆಹಚ್ಚಲಾಗಿದೆ. ನ್ಯೂಯಾರ್ಕ್ ಸಿಟಿಯ ತಂತ್ರಾಂಶ ನೆಟ್‌ವ‌ರ್ಕ್‌ಗೆ ಟಿಕ್‌ಟಾಕ್‌ ಅಪಾಯ ಒಡ್ಡುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತದಲ್ಲೂ ಟಿಕ್‌ಟಾಕ್‌ಗೆ ನಿಷೇಧ ಹೇರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.