ADVERTISEMENT

ಟರ್ಕಿಯಲ್ಲಿ ಇನ್‌ಸ್ಟಾಗ್ರಾಂ ಬಳಕೆಗೆ ನಿರ್ಬಂಧ: ಕಾರಣ ನಿಗೂಢ; ಬಳಕೆದಾರರ ಆಕ್ರೋಶ

ರಾಯಿಟರ್ಸ್
Published 2 ಆಗಸ್ಟ್ 2024, 14:00 IST
Last Updated 2 ಆಗಸ್ಟ್ 2024, 14:00 IST
   

ಅಂಕರ: ಮೆಟಾ ಒಡೆತನದ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನ ಬಳಕೆಗೆ ದೇಶದಾದ್ಯಂತ ನಿರ್ಬಂಧ ಹೇರಲಾಗಿದೆ ಎಂದು ಟರ್ಕಿಯ ಮಾಹಿತಿ ತಂತ್ರಜ್ಞಾನ ನಿಯಂತ್ರಕ ಪ್ರಾಧಿಕಾರ ಹೇಳಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ. 

ಇದರಿಂದಾಗಿ ಕಂಪ್ಯೂಟರ್‌ ಮತ್ತು ಮೊಬೈಲ್‌ ಫೋನ್‌ಗಳಲ್ಲಿ ಇನ್‌ಸ್ಟಾಗ್ರಾಂ ಬಳಸಲು ಸಾಧ್ಯವಾಗದ ಬಳಕೆದಾರರು ಎಕ್ಸ್‌ನಲ್ಲಿ ದೂರಿದ್ದಾರೆ

ಆದರೆ, ಎಷ್ಟು ದಿನಗಳವರೆಗೆ ಈ ನಿರ್ಬಂಧ ಇರಲಿದೆ ಹಾಗೂ ಯಾವ ಕಾರಣಕ್ಕೆ ನಿರ್ಬಂಧ ಹೇರಲಾಗಿದೆ ಎನ್ನುವ ಬಗ್ಗೆ  ಪ್ರಾಧಿಕಾರ ಕಾರಣ ‌ನೀಡಿಲ್ಲ. 

ADVERTISEMENT

ಈ ಕುರಿತು ಟರ್ಕಿ ಅಧ್ಯಕ್ಷರ ಸಂವಹನ ನಿರ್ದೇಶಕ ಅಲ್ಟುನ್‌ ಎನ್ನುವವರು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ‘ಇದು ಸೆನ್ಸಾರ್‌, ಸ್ಪಷ್ಟ ಮತ್ತು ಸರಳವಾಗಿದೆ’ ಎಂದಿದ್ದಾರೆ.

ಟರ್ಕಿಯ ಈ ನಿರ್ಧಾರದ ಕುರಿತು ಮೆಟಾ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಟರ್ಕಿಯ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಪ್ರಾಧಿಕಾರ ಆಗಸ್ಟ್‌ 2 ರಂದು ತನ್ನ ವೆಬ್‌ಸೈಟ್‌ನಲ್ಲಿ ಇನ್‌ಸ್ಟಾಗ್ರಾಂ ನಿರ್ಬಂದಿಸುವ ಬಗ್ಗೆ ಪ್ರಕಟಿಸಿದೆ.

ಹಮಾಸ್‌ನ ಪ್ರಮುಖ ಅಧಿಕಾರಿ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಯ ಕುರಿತಾದ ಪೋಸ್ಟ್‌ಗಳನ್ನು ನಿರ್ಬಂಧಿಸುವ ಉದ್ದೇಶದಿಂದ ಸಂಪೂರ್ಣವಾಗಿ ಇನ್‌ಸ್ಟಾಗ್ರಾಂ ಬಳಕಗೆ ನಿರ್ಬಂಧ ಹೇರಿದ್ದಾರೆ ಎಂದು ಬಳಕೆದಾರರು ವ್ಯಾಖ್ಯಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.