ADVERTISEMENT

ಪ್ರತಿಸ್ಪರ್ಧಿ ಸಾಮಾಜಿಕ ಮಾಧ್ಯಮ ಲಿಂಕ್ ಮತ್ತು ಪ್ರಚಾರದ ಪೋಸ್ಟ್‌ಗೆ ಟ್ವಿಟರ್ ತಡೆ

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಲಿಂಕ್ ಪೋಸ್ಟ್ ಮಾಡಲು ಟ್ವಿಟರ್ ನಿರ್ಬಂಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2022, 9:37 IST
Last Updated 19 ಡಿಸೆಂಬರ್ 2022, 9:37 IST
   

ಬೆಂಗಳೂರು: ಇಲಾನ್ ಮಸ್ಕ್ ಒಡೆತನದ ಟ್ವಿಟರ್ ಹಲವು ಕಾರಣಗಳಿಂದ ಇಂದು ಹೆಚ್ಚು ಸುದ್ದಿಯಲ್ಲಿದೆ.

ಟ್ವಿಟರ್, ಭಾನುವಾರ ಹೊರಡಿಸಿರುವ ಹೊಸ ಸೂಚನೆಯ ಪ್ರಕಾರ, ಟ್ವೀಟ್ ಮಾಡುವಾಗ ಅದರಲ್ಲಿ ಪ್ರತಿಸ್ಪರ್ಧಿ ತಾಣಗಳು, ಆ್ಯಪ್‌ಗಳ ಲಿಂಕ್ ಪೋಸ್ಟ್ ಮಾಡುವಂತಿಲ್ಲ ಮತ್ತು ಯಾವುದೇ ಪ್ರಚಾರ ಕೈಗೊಳ್ಳುವಂತಿಲ್ಲ ಎಂದು ಹೇಳಿದೆ.

ಅಲ್ಲದೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಲಿಂಕ್ ಕೂಡ ಪೋಸ್ಟ್ ಮಾಡುವಂತಿಲ್ಲ ಎಂದು ಟ್ವಿಟರ್ ಹೇಳಿದೆ.

ADVERTISEMENT

ಮಸ್ಟೋಡನ್, ಪೋಸ್ಟ್ ಮತ್ತು ಟ್ರುಥ್ ಸೋಶಿಯಲ್ ತಾಣಗಳ ಲಿಂಕ್ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲು ನಿರ್ಬಂಧವಿದೆ. ಅಲ್ಲದೆ, ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿಕೊಂಡು, ಇತರ ಲಿಂಕ್‌ಗಳನ್ನು ಪೋಸ್ಟ್ ಮಾಡಲು ಕೂಡ ಟ್ವಿಟರ್ ನಿರ್ಬಂಧ ವಿಧಿಸಿದೆ.

ಇದರಿಂದಾಗಿ ವಿವಿಧ ಬ್ಯುಸಿನೆಸ್, ಕ್ರಿಯೇಟರ್‌ಗಳು ಮತ್ತು ವೃತ್ತಿಪರರಿಗೆ ಅನಾನುಕೂಲವಾಗಲಿದೆ.

ಇತ್ತೀಚೆಗೆ ಟ್ವಿಟರ್, ಭಾರತ ಮೂಲದ ಕೂ ಆ್ಯಪ್ ಟ್ವಿಟರ್ ಖಾತೆಯನ್ನು ತೆಗೆದುಹಾಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.