ADVERTISEMENT

ಟ್ವಿಟರ್‌ ಬ್ಲೂ ವೆರಿಫೈ: ಆ್ಯಪಲ್ ಐಫೋನ್‌ಗಳಲ್ಲಿ ಶೀಘ್ರದಲ್ಲಿ ಲಭ್ಯ

ಟ್ವಿಟರ್ ಬ್ಲೂ ವೆರಿಫೈ ಆಯ್ಕೆ ಶೀಘ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2022, 6:37 IST
Last Updated 30 ನವೆಂಬರ್ 2022, 6:37 IST
   

ಬೆಂಗಳೂರು: ಟ್ವಿಟರ್‌ನ ಬಹುಚರ್ಚಿತ ಬ್ಲೂ ವೆರಿಫೈ ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ.

ಆ್ಯಪಲ್ ಐಫೋನ್‌ ಬಳಕೆದಾರರಿಗೆ ಆರಂಭದಲ್ಲಿ ನೂತನ ಆಯ್ಕೆ ದೊರೆಯಲಿದೆ. ನಂತರದಲ್ಲಿ ಇತರ ಬಳಕೆದಾರರಿಗೆ ಹಂತಹಂತವಾಗಿ ಹೊಸ ಫೀಚರ್ ದೊರೆಯಲಿದೆ.

ಶುಕ್ರವಾರದಿಂದ ಐಫೋನ್‌ಗಳಿಗೆ ಹೊಸ ಅಪ್‌ಡೇಟ್ ಮೂಲಕ ಟ್ವಿಟರ್ ನೂತನ ಆಯ್ಕೆ ಪರಿಚಯಿಸುತ್ತಿದೆ.

ADVERTISEMENT

ಬ್ಲೂ ವೆರಿಫೈ ಬ್ಯಾಜ್ಡ್‌ ಬೇಕಾದಲ್ಲಿ ಬಳಕೆದಾರರು ನಿಗದಿತ ಶುಲ್ಕ ಪಾವತಿಸಬೇಕಿದೆ. ತಿಂಗಳ ಚಂದಾದರ ಆಧಾರದಲ್ಲಿ ಶುಲ್ಕ ಪಾವತಿಸಬೇಕಿದೆ.

ಭಾರತದಲ್ಲಿ ತಿಂಗಳ ಶುಲ್ಕ ವಿವರವನ್ನು ಟ್ವಿಟರ್ ಬಹಿರಂಗಪಡಿಸಿಲ್ಲ. ಆದರೆ ಅಮೆರಿಕದಲ್ಲಿ ಬಳಕೆದಾರರು 8 ಡಾಲರ್ ತಿಂಗಳ ಚಂದಾ ಪಾವತಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.