ನವದೆಹಲಿ: ಟ್ವಿಟರ್‌ನಲ್ಲಿ ದ್ವೇಷ ಭಾಷಣ ಗಮನಾರ್ಹವಾಗಿ ಇಳಿಕೆಯಾಗಿದೆ ಎಂದು ಮಾಲೀಕ ಇಲಾನ್ ಮಸ್ಕ್ ಹೇಳಿದ್ದಾರೆ.
‘ಈ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ, ದ್ವೇಷ ಭಾಷಣ ಪ್ರಕರಣಗಳು ಮೂರನೇ ಒಂದರಷ್ಟು ಕಡಿಮೆಯಾಗಿದೆ. ಟ್ವಿಟರ್ ತಂಡಕ್ಕೆ ಅಭಿನಂದನೆಗಳು‘ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
‘ದ್ವೇಷ ಭಾಷಣದ ಪೋಸ್ಟ್ ಹಾಕಿ ರದ್ದಾಗಿರುವ ಖಾತೆಗಳನ್ನು ಮರುಸ್ಥಾಪಿಸಲು ತನಗೆ ಸಂಪೂರ್ಣ ಒಲವಿಲ್ಲ. ಆದರೂ ಈ ಬಗ್ಗೆ ಚಿಂತನೆ ಮಾಡುತ್ತೇನೆ‘ ಎಂದು ಮಸ್ಕ್ ಹೇಳಿದ್ದಾರೆ.
ಆ ಮೂಲಕ ಟ್ವಿಟರ್‌ನಿಂದ ರದ್ದಾಗಿರುವ ಹಲವು ಖಾತೆಗಳು ಮರುಸ್ಥಾಪನೆಯಾಗುವ ಸುಳಿವನ್ನೂ ನೀಡಿದ್ದಾರೆ.
ಮಸ್ಕ್ ಅವರ ಟ್ವೀಟ್‌ಗೆ ಥರಹೇವಾರಿ ಕಮೆಂಟ್‌ಗಳು ಬಂದಿವೆ.
ಕೆಲ ದಿನಗಳ ಹಿಂದಷ್ಟೆ ಮಸ್ಕ್ ಟ್ವಿಟರ್ ಅನ್ನು ಖರೀದಿ ಮಾಡಿದ್ದರು. ಆ ಬಳಿಕ ಹಲವು ಬದಲಾವಣೆಗಳನ್ನು ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.