ಬೆಂಗಳೂರು: ಆಪ್ತ ಗೆಳೆಯರಿಗಾಗಿ ಮತ್ತು ಸಮಾನ ಮನಸ್ಕರ ವೇದಿಕೆ ನಿರ್ಮಿಸಿಕೊಳ್ಳಲು ಅನುಕೂಲವಾಗುವಂತೆ ಟ್ವಿಟರ್, ಫ್ರೆಂಡ್ಸ್ ಸರ್ಕಲ್ ಆಪ್‌ಡೇಟ್ ಪರಿಚಯಿಸಿದೆ.
ಇದರ ಮೂಲಕ, ಬಳಕೆದಾರರು ತಮ್ಮ ಆಪ್ತ ವಲಯದ 150 ಮಂದಿಯನ್ನು ಟ್ವಿಟರ್ ಸರ್ಕಲ್‌ನಲ್ಲಿ ಸೇರಿಸಿಕೊಳ್ಳಬಹುದಾಗಿದೆ.
ಟ್ವಿಟರ್ ವೆಬ್, ಐಓಎಸ್ ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೂತನ ಫ್ರೆಂಡ್ಸ್ ಸರ್ಕಲ್ ಅಪ್‌ಡೇಟ್ ದೊರೆಯಲಿದೆ.
ಫ್ರೆಂಡ್ಸ್ ಸರ್ಕಲ್ ಅಪ್‌ಡೇಟ್ ಒದಗಿಸುವಂತೆ ಬಳಕೆದಾರರು ಕಂಪನಿಯನ್ನು ಕೇಳಿಕೊಂಡಿದ್ದರು. ಅದರಂತೆ, ನೂತನ ಅಪ್‌ಡೇಟ್ ಬಳಕೆದಾರರಿಗೆ ಲಭ್ಯವಾಗಿದೆ.
ಟ್ವಿಟರ್‌ನಲ್ಲಿ ಹೊಸ ಪೋಸ್ಟ್ ಮಾಡುವ ಸಂದರ್ಭದಲ್ಲಿ ಮುಂದೆ ಎರಡು ಆಯ್ಕೆಗಳು ಇರಲಿದ್ದು, ಜನರಲ್ ಮತ್ತು ಕ್ಲೋಸ್ ಫ್ರೆಂಡ್ಸ್ ಎನ್ನುವಲ್ಲಿ, ನಮಗೆ ಬೇಕಾಗಿರುವುದನ್ನು ಆಯ್ಕೆ ಮಾಡಿಕೊಂಡು ಟ್ವೀಟ್ ಮಾಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.