ಬೆಂಗಳೂರು: ಸಾಮಾಜಿಕ ಜಾಲತಾಣಗಳ ಪೈಕಿ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ಟ್ವಿಟರ್, ಇಲಾನ್ ಮಸ್ಕ್ ತೆಕ್ಕೆಗೆ ಬಂದ ಬಳಿಕ ಹಲವು ವಿವಾದಗಳಿಗೂ ಕಾರಣವಾಗಿದೆ.
ಟ್ವಿಟರ್ ಬ್ಲೂ ವೆರಿಫಿಕೇಶನ್ ಹೊಂದಿರುವವರು ತಿಂಗಳ ಚಂದಾ ಶುಲ್ಕ ಪಾವತಿಸಬೇಕು ಎನ್ನುವ ಹೊಸ ನಿಯಮ ಜಾರಿಗೆ ಬಂದಿದೆ.
ನೂತನ ಅಪ್‌ಡೇಟ್‌ನಲ್ಲಿ, ಟ್ವಿಟರ್ ಪ್ರತಿ ಟ್ವೀಟ್ ಅನ್ನು ಎಷ್ಟು ಜನರು ವೀಕ್ಷಿಸಿದ್ದಾರೆ ಎನ್ನುವುದನ್ನು ತಿಳಿಸಿಕೊಡಲಿದೆ.
ಟ್ವೀಟ್ ವೀವ್ಸ್ ಅಪ್‌ಡೇಟ್ ಕುರಿತಂತೆ ಮಸ್ಕ್ ಮಾಹಿತಿ ನೀಡಿದ್ದಾರೆ.
ಶೀಘ್ರದಲ್ಲೇ ವಿಡಿಯೊ ಕೌಂಟ್ ರೀತಿಯಲ್ಲಿಯೇ, ಟ್ವೀಟ್ ವೀವ್ಸ್ ಕೂಡ ದೊರೆಯಲಿದೆ, ನೀವು ಅಂದುಕೊಂಡಿರುವುದಕ್ಕಿಂತಲೂ ಟ್ವಿಟರ್ ಮತ್ತೂ ಹೆಚ್ಚಿನದನ್ನು ಒದಗಿಸಲಿದೆ ಎಂದು ಮಸ್ಕ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.