ಬೆಂಗಳೂರು: ದೇಶದ ಪ್ರಮುಖ ನ್ಯೂಸ್ ಏಜೇನ್ಸಿಯಾದ ಏಷಿಯಾ ನ್ಯೂಸ್ ಇಂಟರನ್ಯಾಷನಲ್‌ನ (ANI) ಅಧಿಕೃತ ಟ್ವಿಟರ್ ಖಾತೆಯನ್ನು ಟ್ವಿಟರ್ ಕಂಪನಿ ಲಾಕ್ ಮಾಡಿತ್ತು.
ಅದೇ ರೀತಿ ಎನ್‌ಡಿಟಿವಿಯ ಅಧಿಕೃತ ಟ್ವಿಟರ್ ಅಕೌಂಟ್ ಸಹ ಲಾಕ್ ಮಾಡಿತ್ತು.
ಈ ಬಗ್ಗೆ ANI ಸಂಪಾದಕಿ ಸ್ಮಿತಾ ಪ್ರಕಾಶ್ ಅವರು ಮಾಹಿತಿ ಹಂಚಿಕೊಂಡಿದ್ದು, ANI ಫಾಲೋವರ್‌ಗಳಿಗೆ ಇದು ಕೆಟ್ಟ ಸುದ್ದಿ. 7.6 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ದೇಶದ ಅತಿದೊಡ್ಡ ನ್ಯೂಸ್ ಏಜೇನ್ಸಿಯನ್ನು ಲಾಕ್ ಮಾಡಲಾಗಿದೆ. ಈ ಅಕೌಂಟ್‌ಗೆ 13 ವರ್ಷ ವಯಸ್ಸಾಗಿಲ್ಲ ಎಂದು ಕಾರಣ ನೀಡಲಾಗಿದೆ. ಮೊದಲು ಗೋಲ್ಡ್ ಟಿಕ್, ಬ್ಲು ಟಿಕ್ ಈಗ ಅಕೌಂಟ್ ಅನ್ನೇ ತಗೆದಿದ್ದಾರೆ ಎಂದು ಟ್ವಿಟರ್ ಸಿಇಒ ಎಲಾನ್ ಮಸ್ಕ್‌ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.
ಟ್ವಿಟರ್ ಕಂಪನಿ ANI ಗೆ ಮೇಲ್ ಕಳಿಸಿದ್ದು ನೀವು ಕನಿಷ್ಠ 13 ವರ್ಷ ಇರಬೇಕು ಎಂಬ ನಿಯಮಾವಳಿಯನ್ನು ಮುರಿದಿದ್ದೀರಾ. ಅದಕ್ಕಾಗಿ ನಿಮ್ಮ ಅಕೌಂಟ್ ಅನ್ನು ಲಾಕ್ ಮಾಡಲಾಗಿದೆ ಎಂದಿತ್ತು.
ಸ್ಮಿತಾ ಪ್ರಕಾಶ್ ಅವರ ಟ್ವೀಟ್‌ಗೆ ಕೆಲವರು ಪ್ರತಿಕ್ರಿಯಿಸಿ ಇದು ಗೋಲ್ಡ್ ಟಿಕ್ ಪಡೆಯುವಲ್ಲಿ ನಿಮ್ಮ ಸಿಬ್ಬಂದಿ ಏನಾದರೂ ತಾಂತ್ರಿಕ ತೊಂದರೆ ಮಾಡಿರಬಹುದು ಎಂದು ಗಮನಕ್ಕೆ ತಂದಿದ್ದರು..
ಇದೇ ರೀತಿ ಎನ್‌ಡಿಟಿವಿ ಅಕೌಂಟ್ ಕೂಡ ಲಾಕ್ ಆಗಿದ್ದು ಈ ಬಗ್ಗೆ ಎನ್‌ಡಿಟಿವಿ ಯಾವುದೇ ಸ್ಪಷ್ಟನೇ ನೀಡಿರಲಿಲ್ಲ. ಆದರೆ ಕೆಲ ಸಮಯದ ನಂತರ ಎರಡೂ ಟ್ವಿಟರ್ ಅಕೌಂಟ್‌ಗಳು ಪುನರ್‌ಸ್ಥಾಪನೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.