ನವದೆಹಲಿ:2019 ಜನವರಿ 1ರಿಂದ ಮೇ 23ರವರೆಗೆಟ್ವಿಟರ್‌ನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿ396 ದಶಲಕ್ಷ ಟ್ವೀಟ್‌ಗಳಾಗಿವೆ.ಅಂದರೆ #Loksabhaelections2019 ಹ್ಯಾಶ್‌ಟ್ಯಾಗ್ಬಳಸಿದ ಟ್ವೀಟ್‌ಗಳು ಇವು. 2014ರ ಚುನಾವಣೆಗೆ ಹೋಲಿಸಿದರೆ ಈ ರೀತಿಯ ಸಂವಾದಗಳ ಸಂಖ್ಯೆ ಶೇ.600ರಷ್ಟು ಜಾಸ್ತಿಯಾಗಿದೆ.
ಚುನಾವಣೆಯ ಸಮಯದಲ್ಲಿ ಅತೀ ಹೆಚ್ಚು ಬಾರಿ ಟ್ವಿಟರ್‌ನಲ್ಲಿ ಮೆನ್ಶನ್ ಆದ ಹೆಸರು ನರೇಂದ್ರ ಮೋದಿ (@Narendra Modi) ಯವರದ್ದೇ ಆಗಿದೆ. ರಾಜಕೀಯ ಪಕ್ಷಗಳ ಬಗ್ಗೆ ಹೇಳುವುದಾದರೆ ಬಿಜೆಪಿ ( @BJP4India)ಅತೀ ಹೆಚ್ಚು ಬಾರಿ ಮೆನ್ಶನ್ ಆಗಿದೆ ಎಂದು ಟ್ವಿಟರ್ ಕಂಪನಿ ಹೇಳಿದೆ.
ಗುರುವಾರ ಮತ ಎಣಿಕೆ ಮುಗಿಯುತ್ತಾ ಬರುತ್ತಿದ್ದಂತೆ ಮೋದಿಯವರು #VijaiBharat ಬಳಸಿ ಟ್ವೀಟಿಸಿದ ಟ್ವೀಟ್‌ಗೆ ಸಾವಿರಾರು ಪ್ರತಿಕ್ರಿಯೆಗಳು ಬಂದಿವೆ.ಅದೇ ವೇಳೆ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಲೈಕ್, ರೀಟ್ವೀಟ್ ಆದ ಟ್ವೀಟ್ ಇದಾಗಿದೆ.
ಮತ ಎಣಿಕೆಯ ದಿನವೇ 3.2 ದಶಲಕ್ಷ ಟ್ವೀಟ್‌ಗಳಾಗಿವೆ.ಇದರಲ್ಲಿ ಸಂಜೆ 3 ಮತ್ತು 4 ಗಂಟೆಯ ನಡುವೆ ಅತೀ ಹೆಚ್ಚು ಟ್ವೀಟ್‌ಗಳಾಗಿವೆ.
ಏಪ್ರಿಲ್11 ರಿಂದ ಮೇ 19ರವರೆಗೆ ದೇಶದ ಭದ್ರತೆ ವಿಷಯಕ್ಕೆ ಸಂಬಂಧಿಸಿದ ಚರ್ಚೆಗಳೇ ಟ್ವಿಟರ್‌ನಲ್ಲಿ ಹೆಚ್ಚು ಚರ್ಚೆಯಾಗಿದ್ದು. ಇನ್ನುಳಿದಂತೆ ಧರ್ಮ, ಕೆಲಸ ಮತ್ತು ಉದ್ಯೋಗ, ಕೃಷಿ ಮತ್ತು ನೋಟುರದ್ದತಿ ವಿಷಯಗಳು ಚರ್ಚೆಯಾಗಿವೆ.
#mainbhichowkidar ಮತ್ತು Nyay scheme - ವಿಷಯಗಳು ಮತದಾನದಿಂದ ಹಿಡಿದು ಎತ ಎಣಿಕೆ ದಿನದವರೆಗೆ ಅತೀ ಹೆಚ್ಚು ಚರ್ಚೆಗೊಳಗಾದ ವಿಷಯಗಳಾಗಿವೆ.
ಚುನಾವಣೆ ವಿಷಯಕ್ಕೆ ಸಂಬಂಧಿಸಿ ಎನ್‌ಡಿಎ ಸದಸ್ಯರ ಬಗ್ಗೆ ಟ್ವಿಟರ್‌ನಲ್ಲಿ ಶೇ. 53ರಷ್ಟು ಮೆನ್ಶನ್ ಆಗಿದ್ದು @INCIndia ಮತ್ತು ಯುಪಿಎ ಮೈತ್ರಿಕೂಟದ ಇತರ ಸದಸ್ಯರ ಟ್ವಿಟರ್ ಹ್ಯಾಂಡಲ್‌ಗಳುಶೇ. 37 ರಷ್ಟು ಮೆನ್ಶನ್ ಆಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.