ADVERTISEMENT

Twitter 2021: ದೇಶದಲ್ಲಿ ಅತಿಹೆಚ್ಚು ರಿಟ್ವೀಟ್, ಲೈಕ್ ಪಡೆದ ಟ್ವೀಟ್‌ಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2021, 6:27 IST
Last Updated 9 ಡಿಸೆಂಬರ್ 2021, 6:27 IST
ಟ್ವಿಟರ್ 2021ರ ವಾರ್ಷಿಕ ವರದಿ
ಟ್ವಿಟರ್ 2021ರ ವಾರ್ಷಿಕ ವರದಿ   

ಬೆಂಗಳೂರು: 2021 ವರ್ಷದ ಕೊನೆಯ ತಿಂಗಳು ಡಿಸೆಂಬರ್‌ನಲ್ಲಿ ನಾವಿದ್ದೇವೆ. ಈ ವರ್ಷದ ಪ್ರಮುಖ ಸರ್ಚ್ ಟ್ರೆಂಡ್‌ಗಳನ್ನು ಟ್ವಿಟರ್ ಇಂಡಿಯಾ ಬಿಡುಗಡೆ ಮಾಡಿದೆ.

ಭಾರತದ ಕೋವಿಡ್ ನಿಧಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಪ್ಯಾಟ್ ಕಮ್ಮಿನ್ಸ್ ಅವರು ದೇಣಿಗೆ ನೀಡಿರುವ ಬಗ್ಗೆ ಮಾಡಿದ್ದ ಟ್ವೀಟ್ ಅನ್ನು ಅತಿ ಹೆಚ್ಚು ಬಾರಿ ದೇಶದಲ್ಲಿ ರಿಟ್ವೀಟ್ ಮಾಡಲಾಗಿದೆ.

ಅಲ್ಲದೆ, #COVID19, #FarmersProtest, ಮತ್ತು #TeamIndia ಹ್ಯಾಶ್‌ಟ್ಯಾಗ್‌ಗಳು ಅತಿಹೆಚ್ಚು ರಿಟ್ವೀಟ್ ಆಗಿವೆ.

ADVERTISEMENT

ವಿರಾಟ್ ಕೊಹ್ಲಿ ತಮಗೆ ಮಗಳು ಜನಿಸಿರುವ ಸಂಗತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಆ ಟ್ವೀಟ್ ಅನ್ನು ಅತಿಹೆಚ್ಚಿನ ಮಂದಿ ಲೈಕ್ ಮಾಡಿದ್ದಾರೆ. 2020ರಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಅವರು ತಾನು ಗರ್ಭಿಣಿಯಾಗಿರುವುದಾಗಿ ಘೋಷಿಸಿದ್ದ ಟ್ವೀಟ್ ಅತಿ ಹೆಚ್ಚಿನ ಲೈಕ್ಸ್ ಗಳಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡ ಕುರಿತು ಮಾಡಿದ್ದ ಟ್ವೀಟ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ರಿಟ್ವೀಟ್ ಮಾಡಿದ್ದಾರೆ.

ಜತೆಗೆ ಪ್ರಧಾನಿ ಮೋದಿ ಅವರು ಟೀಮ್ ಇಂಡಿಯಾ ಕ್ರಿಕೆಟ್ ತಂಡಕ್ಕೆ ಶುಭಕೋರಿದ್ದ ಟ್ವೀಟ್ ಅನ್ನು ದೇಶದಲ್ಲಿ ಗರಿಷ್ಠ ಸಂಖ್ಯೆಯ ಜನರು ಲೈಕ್ ಮಾಡಿದ್ದಾರೆ.

ಟಾಟಾ ಗ್ರೂಪ್, ಏರ್ ಇಂಡಿಯಾವನ್ನು ಮರಳಿ ಪಡೆದ ಬಗ್ಗೆ ಟಾಟಾ ಸನ್ಸ್ ಚೇರ್ಮನ್ ರತನ್ ಟಾಟಾ ಅವರು ಮಾಡಿದ್ದ ಟ್ವೀಟ್ ಅನ್ನು ಹೆಚ್ಚಿನ ಜನರು ಲೈಕ್ ಮತ್ತು ರಿಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.