ADVERTISEMENT

ವಾಯ್ಸ್‌ ಟ್ವೀಟ್‌ಗಳಿಗೆ ಸ್ವಯಂಚಾಲಿತ ಶೀರ್ಷಿಕೆ: ಟ್ವಿಟರ್‌ನಲ್ಲಿ ಹೊಸ ವೈಶಿಷ್ಟ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜುಲೈ 2021, 9:58 IST
Last Updated 17 ಜುಲೈ 2021, 9:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: 2020ರ ಜೂನ್‌ನಲ್ಲಿ ವಾಯ್ಸ್‌ ಟ್ವೀಟ್‌ಗಳ ವೈಶಿಷ್ಟ್ಯವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ಪರಿಚಯಿಸಿತು. ಈ ವಾಯ್ಸ್‌ ಟ್ವೀಟ್‌ಗಳಿಗೆ ಶೀರ್ಷಿಕೆಗಳನ್ನು ಸೇರಿಸುವ ಅವಕಾಶ ನೀಡದ ಕಾರಣ ಟೀಕೆಗಳು ವ್ಯಕ್ತವಾಗಿದ್ದವು. ಧ್ವನಿ ಮೂಲಕ ಟ್ವೀಟ್‌ ಮಾಡುವುದನ್ನು ಪರಿಚಯಿಸಿದ ಒಂದು ವರ್ಷದ ನಂತರ ಸ್ವಯಂಚಾಲಿತವಾಗಿ ಶೀರ್ಷಿಕೆ ನೀಡುವ ವೈಶಿಷ್ಟ್ಯವನ್ನು ಟ್ವಿಟರ್‌ ಅಳವಡಿಸಿದೆ.

ಈ ವೈಶಿಷ್ಟ್ಯವು ಪ್ರಸ್ತುತ ಐಒಎಸ್‌ನಲ್ಲಿ ಮಾತ್ರ ಲಭ್ಯವಿದೆ. ಇದು ಇಂಗ್ಲಿಷ್, ಜಪಾನೀಸ್, ಸ್ಪ್ಯಾನಿಷ್, ಪೋರ್ಚುಗೀಸ್, ಟರ್ಕಿಷ್, ಹಿಂದಿ, ಫ್ರೆಂಚ್, ಇಂಡೋನೇಷಿಯನ್, ಕೊರಿಯನ್ ಮತ್ತು ಇಟಾಲಿಯನ್ ಭಾಷೆಗಳನ್ನು ಬೆಂಬಲಿಸುತ್ತದೆ.

ಹೊಸ ವೈಶಿಷ್ಟ್ಯದ ಬಗ್ಗೆ ಟ್ವೀಟ್ ಮೂಲಕ ಬಹಿರಂಗಪಡಿಸಿರುವ ಟ್ವಿಟರ್‌, 'ನಾವು ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ. ಹೊಸ ವೈಶಿಷ್ಟ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ವಾಯ್ಸ್‌ ಟ್ವೀಟ್‌ಗಳಿಗೆ ಶೀರ್ಷಿಕೆಗಳನ್ನು ನೀಡುವ ವೈಶಿಷ್ಟ್ಯವು ಇಂದು ಹೊರಬರುತ್ತಿವೆ. ಈಗ ನೀವು ವಾಯ್ಸ್‌ ಟ್ವೀಟ್ ಅನ್ನು ರೆಕಾರ್ಡ್ ಮಾಡಿದಾಗ, ಶೀರ್ಷಿಕೆಗಳು ಸ್ವಯಂಚಾಲಿತವಾಗಿ ಉತ್ಪತ್ತಿಯಾಗುತ್ತವೆ ಮತ್ತು ಗೋಚರಿಸುತ್ತವೆ. ಶೀರ್ಷಿಕೆಗಳನ್ನು ವೀಕ್ಷಿಸಲು ವೆಬ್‌ನಲ್ಲಿರುವ 'ಸಿಸಿ' ಬಟನ್ ಕ್ಲಿಕ್ ಮಾಡಿ' ಎಂದು ಹೇಳಿದೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.