ADVERTISEMENT

ಮುಂಬರುವ ತಿಂಗಳುಗಳಲ್ಲಿ ಎಡಿಟ್ ವೈಶಿಷ್ಟ್ಯ ಪರೀಕ್ಷೆ ನಡೆಸಲಿರುವ ಟ್ವಿಟರ್

ರಾಯಿಟರ್ಸ್
Published 6 ಏಪ್ರಿಲ್ 2022, 5:48 IST
Last Updated 6 ಏಪ್ರಿಲ್ 2022, 5:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸ್ಯಾನ್‌ ಫ್ರಾನ್ಸಿಸ್ಕೊ: ಕಳೆದ ವರ್ಷದಿಂದಲೇ ಎಡಿಟ್ ಆಯ್ಕೆ ಕುರಿತು ಕಾರ್ಯನಿರ್ವಹಿಸಲಾಗುತ್ತಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಆಯ್ದ ಟ್ವಿಟರ್ ಬ್ಲೂ ಸದಸ್ಯರೊಂದಿಗೆ ಈ ವೈಶಿಷ್ಟ್ಯವನ್ನು ಪರೀಕ್ಷಿಸಲಾಗುತ್ತದೆ ಎಂದು ಟ್ವಿಟರ್ ಮಂಗಳವಾರ ಹೇಳಿದೆ.

ಟ್ವಿಟರ್ ತನ್ನ ಅತಿದೊಡ್ಡ ಪಾಲುದಾರ ಎಲೊನ್ ಮಸ್ಕ್ ಅವರು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಎಡಿಟ್ ಆಯ್ಕೆಯನ್ನು ಬಯಸುವಿರಾ ಎಂದು ಬಳಕೆದಾರರನ್ನು ಕೇಳಿದ್ದರು. ಇದರಿಂದ ಯಾರೊಬ್ಬರಿಂದಲೂ ಎಡಿಟ್ ಆಯ್ಕೆಯ ಉಪಾಯ ಲಭ್ಯವಾಗಿಲ್ಲ ಎಂದು ಟ್ವೀಟ್‌ನಲ್ಲಿ ತಿಳಿಸಿದೆ. 😉 ಎಮೋಜಿಯನ್ನು ಹಾಕಿದೆ.

ಸೋಮವಾರವಷ್ಟೇ, ಟೆಸ್ಲಾ ಸಿಇಒ ಎಲೊನ್ ಮಸ್ಕ್ ಅವರು ಮೈಕ್ರೋಬ್ಲಾಗಿಂಗ್ ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಶೇ 9.2ರಷ್ಟು ಪಾಲು ಹೊಂದಿರುವುದನ್ನು ಬಹಿರಂಗಪಡಿಸಿದ್ದರು.

ADVERTISEMENT

ಟ್ವಿಟರ್ ಸಿಇಒ ಪರಾಗ್‌ ಅಗರ್ವಾಲ್‌ ಕೂಡ 'ಎಚ್ಚರಿಕೆಯಿಂದ ಮತ ಚಲಾಯಿಸಿ' ಎಂದು ಹೇಳಿದ್ದರು.

ಟ್ವಿಟರ್ ಬ್ಲೂ ಸದಸ್ಯರು ಮಾಸಿಕ ಚಂದಾದಾರಿಕೆಗಾಗಿ ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ಅಪ್ಲಿಕೇಶನ್ ಗ್ರಾಹಕೀಕರಣಗಳಿಗೆ ವಿಶೇಷ ಪ್ರವೇಶವನ್ನು ಪಡೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.