ಬೆಂಗಳೂರು: ಟ್ವಿಟರ್ ಬಳಕೆದಾರರ ಬಹುಬೇಡಿಕೆಯ ‘ಎಡಿಟ್ ಟ್ವೀಟ್‘ ಆಯ್ಕೆಯನ್ನು ಪರಿಶೀಲಿಸಲಾಗುತ್ತಿದೆ.
ಈ ಬಗ್ಗೆ ಟ್ವಿಟರ್, ಟ್ವೀಟ್ ಮೂಲಕ ಸುಳಿವು ನೀಡಿದೆ.
ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ ಬಳಿಕ ಅದನ್ನು ತಿದ್ದಲು, ಬದಲಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಎಡಿಟ್ ಆಯ್ಕೆ ನೀಡಬೇಕು ಎಂದು ಬಳಕೆದಾರರು ಒತ್ತಾಯಿಸುತ್ತಲೇ ಬಂದಿದ್ದರು.
ಅದರಂತೆ, ಬಳಕೆದಾರರ ಬೇಡಿಕೆಗೆ ಸ್ಪಂದಿಸಿರುವ ಟ್ವಿಟರ್, ಎಡಿಟ್ ಆಯ್ಕೆಯನ್ನು ಪರಿಶೀಲನೆ ನಡೆಸಲು ಮುಂದಾಗಿದೆ.
ಕಳೆದ ಏಪ್ರಿಲ್‌ನಲ್ಲಿ, ಟ್ವಿಟರ್‌ನಲ್ಲಿ ಎಡಿಟ್ ಆಯ್ಕೆ ಬೇಕೇ ಎಂದು ಕಂಪನಿ ಬಳಕೆದಾರರನ್ನು ಕೇಳಿತ್ತು. ಅದರಂತೆ, ಬಹಳಷ್ಟು ಬಳಕೆದಾರರು ಎಡಿಟ್ ಫೀಚರ್ ಅಪ್‌ಡೇಟ್‌ಗಾಗಿ ಒತ್ತಾಯಿಸಿದ್ದರು.
ಎಡಿಟ್ ಫೀಚರ್ ಪರೀಕ್ಷಾರ್ಥ ಬಳಕೆಯ ಬಳಿಕ ಎಲ್ಲರಿಗೂ ದೊರೆಯಲಿದೆ. ಎಡಿಟ್ ಟ್ವೀಟ್ ಮೂಲಕ, ಈಗಾಗಲೇ ಪೋಸ್ಟ್ ಮಾಡಿರುವ ಟ್ವೀಟ್ ಅನ್ನು ತಿದ್ದಲು ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.