ನವದೆಹಲಿ: ಕಂಪನಿಯ ಸೂಕ್ಷ್ಮ ಮಾಹಿತಿ, ಆಂತರಿಕ ಇ ಮೇಲ್ ಸಂವಹನ ಮತ್ತು ಇತರ ಯಾವುದೇ ದಾಖಲೆಗಳನ್ನು ಮಾಧ್ಯಮಗಳಿಗೆ ಮತ್ತು ಇತರ ಮೂಲಗಳಿಗೆ ಸೋರಿಕೆ ಮಾಡುವ ಉದ್ಯೋಗಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಟ್ವಿಟರ್ ಕಂಪನಿ ಮುಖ್ಯಸ್ಥ ಇಲಾನ್ ಮಸ್ಕ್ ಹೇಳಿದ್ದಾರೆ.
ಉದ್ಯೋಗಿಗಳಿಗೆ ಈ ಬಗ್ಗೆ ಇಲಾನ್ ಮಸ್ಕ್ ಕಳುಹಿಸಿರುವ ಇ ಮೇಲ್ ತಮಗೆ ಲಭ್ಯವಾಗಿದೆ ಎಂದು ಝೋ ಶಿಫರ್ ಹೇಳಿದ್ದಾರೆ.
ಕಂಪನಿಯ ಆಂತರಿಕ ಮಾಹಿತಿಯನ್ನು ಸೋರಿಕೆ ಮಾಡದಂತೆ ನಿರ್ಬಂಧಗಳಿವೆ. ಅವುಗಳು ಎಲ್ಲಿಯಾದರೂ ಸೋರಿಕೆಯಾದರೆ, ಅಂತಹ ವ್ಯಕ್ತಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಮಸ್ಕ್ ಸೂಚಿಸಿದ್ದಾರೆ ಎಂದು ಝೋ ಟ್ವೀಟ್ ಮಾಡಿದ್ದಾರೆ.
ಟ್ವಿಟರ್ ಕಂಪನಿಗೆ ಹಾನಿ ಮಾಡುವಂತಹ ಯಾವುದೇ ರೀತಿಯ ಮಾಹಿತಿ, ಇ ಮೇಲ್ ಸೋರಿಕೆಯಾದರೂ, ಅದನ್ನು ಪತ್ತೆಹಚ್ಚಿ, ಅಂತಹ ಉದ್ಯೋಗಿಯ ವಿರುದ್ಧ ಸಂಬಂಧಿತ ಕ್ರಮವನ್ನು ಕೈಗೊಳ್ಳಲು ಸಂಸ್ಥೆ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.