ADVERTISEMENT

ಜನರು ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು; ಗುಂಪುದಾಳಿ ವಿರುದ್ಧ ಟ್ವೀಟ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2018, 13:50 IST
Last Updated 6 ಆಗಸ್ಟ್ 2018, 13:50 IST
   

ಬೆಂಗಳೂರು: ದೇಶದಲ್ಲಿ ಗುಂಪುದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದನ್ನು ಖಂಡಿಸಿ ಟ್ವೀಟಿಗರು ಗುಂಪುದಾಳಿ ವಿರುದ್ದ ಅಭಿಯಾನ ಆರಂಭಿಸಿದ್ದಾರೆ.#SayNoToMobocracy ಎಂಬ ಹ್ಯಾಶ್‍ಟ್ಯಾಗ್ ಬಳಸಿ ಟ್ವಿಟರಾತಿಗಳು ಗುಂಪುದಾಳಿ ವಿರುದ್ಧ ಖಂಡನೆ ವ್ಯಕ್ತ ಪಡಿಸುತ್ತಿದ್ದು, ಈ ಹ್ಯಾಶ್‍ಟ್ಯಾಗ್ ಟ್ರೆಂಡ್ ಆಗಿದೆ.

ಸಿನಿಮಾ ಥಿಯೇಟರ್‍‍ನ ನೌಕರರಿಗೆ ಹೊಡೆಯುವುದು ತಪ್ಪು. ಸಮಸ್ಯೆಯ ಪೂರ್ವಾಪರ ತಿಳಿಯದೆ ಗುಂಪುಗೂಡಿ ಹಲ್ಲೆ ನಡೆಸಬಾರದು ಎಂದು ಸಂಜಯ್ ಭಫ್ನಾ ಟ್ವೀಟಿಸಿದ್ದಾರೆ.

2018, ಜೂನ್ 28ರಂದು ಪುಣೆಯ ಪಿವಿಆರ್ ಮಲ್ಟಿಪ್ಲೆಕ್ಸ್ ನಲ್ಲಿ ದುಬಾರಿ ಬೆಲೆಗೆ ಆಹಾರ ಮಾರುತ್ತಿರುವುದನ್ನು ಖಂಡಿಸಿ ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಕಾರ್ಯಕರ್ತರು ದಾಂಧಲೆ ನಡೆಸಿದ್ದರು. ಈ ಕಾರ್ಯಕರ್ತರ ಗುಂಪಿನಲ್ಲಿ ಮಾಜಿ ಕಾರ್ಪೊರೇಟರ್ ಕಿಶೋರ್ ಶಿಂಧೆ ಕೂಡಾ ಭಾಗಿಯಾಗಿದ್ದು, ಪಿವಿಆರ್ ನೌಕರರಿಗೆ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.ಅದೇ ವಿಡಿಯೊ ತುಣುಕನ್ನು ಸಂಜಯ್ ಭಫ್ನಾ ಸೇರಿದಂತೆ ಹಲವಾರು ಮಂದಿ ಟ್ವೀಟ್ ಮಾಡಿ ಗುಂಪುದಾಳಿ ವಿರುದ್ಧ ದನಿಯೆತ್ತಿದ್ದಾರೆ.

ADVERTISEMENT


ಟ್ವೀಟ್ ಪ್ರತಿಕ್ರಿಯೆಗಳು

ಸಿನಿಮಾ ಥಿಯೇಟರ್‍‍ನ ನೌಕರರಿಗೆ ಹೊಡೆಯುವುದು ತಪ್ಪು. ಸಮಸ್ಯೆಯ ಪೂರ್ವಾಪರ ತಿಳಿಯದೆ ಗುಂಪುಗೂಡಿ ಹಲ್ಲೆ ನಡೆಸಬಾರದು.

ಬಿಜೆಪಿ ಅಧಿಕಾರಕ್ಕೇರಿದ ನಂತರ ಗುಂಪುದಾಳಿ ಎಂಬ ಪದ ಜನಪ್ರಿಯವಾಗಿದೆ. ಇದಕ್ಕಿಂತ ಮುನ್ನ ಭಾರತ ಅಪರಾಧ ಮುಕ್ತವಾಗಿತ್ತು ಎಂಬುದನ್ನು ನೆನಪಿಡಿ.

ನರೇಂದ್ರ ಮೋದಿಯವರು ತಮ್ಮ ಭಕ್ತರಲ್ಲಿ ಗುಂಪುದಾಳಿ ಮಾಡಬೇಡಿ ಎಂದು ಹೇಳಿದರೆ, ಕೆಲಸ ಎಲ್ಲಿದೆ ?ಎಂಬ ಪ್ರಶ್ನೆಗೆ ಉತ್ತರಿಸಿದರೆ ಜನರು ಕಾನೂನು ಕೈಗೆತ್ತಿಕೊಳ್ಳುವುದನ್ನು ನಿಲ್ಲಿಸುತ್ತಾರೆ.

ಪ್ರಜಾಪ್ರಭುತ್ವವಿರುವ ದೇಶದಲ್ಲಿ ಪ್ರತಿಯೊಬ್ಬರೂ ಕಾನೂನನ್ನು ಪಾಲಿಸುವುದು ಅವರ ಹಕ್ಕು.

ಪಿವಿಆರ್ ನೌಕರರ ಮೇಲಿನ ದಾಳಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲ. ದೈಹಿಕ ಹಿಂಸೆ ಸರಿಯಲ್ಲ, ಗುಂಪುದಾಳಿ ನಿಲ್ಲಲೇಬೇಕು.

ಶಿಕ್ಷಿತ ಮತ್ತು ಜವಾಬ್ದಾರಿಯುತ ಪ್ರಜೆಗಳಾಗಿ ನಾವು ಈ ರೀತಿ ವರ್ತಿಸುವುದು ಸರಿಯಲ್ಲ

ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ನಿಲುವುಗಳಿರುತ್ತವೆ. ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಲು ನ್ಯಾಯಾಲಯಗಳಿವೆ. ಇದಕ್ಕೆಲ್ಲಾ ಅಹಿಂಸೆಯ ದಾರಿ ಸ್ವೀಕರಿಸಬಾರದು.

ಪ್ರಜಾಪ್ರಭುತ್ವ ನಮ್ಮ ಬದುಕನ್ನು ಸುರಕ್ಷಿತ ಮತ್ತು ಉತ್ತಮವಾಗಿರುವಂತೆ ಮಾಡುತ್ತದೆ. ಗುಂಪುದಾಳಿ ಜಂಗಲ್ ರಾಜ್‍ನಂತೆ ಮಾಡುತ್ತದೆ.

ಕಾನೂನು ಮತ್ತು ಆದೇಶಗಳನ್ನು ಯಾರೂ ಕೈಗೆತ್ತಿಕೊಳ್ಳಬಾರದು. ಭೇದಭಾವ ತೊರೆದು ಮಾನವೀಯತೆ ತನ್ನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.