ADVERTISEMENT

ಟ್ವಿಟರ್ ಬಳಕೆದಾರರು ಬ್ಲೂ ಟಿಕ್‌ಗಾಗಿ ಶೀಘ್ರದಲ್ಲೇ ಹಣ ಪಾವತಿಸಬೇಕು!

ರಾಯಿಟರ್ಸ್
Published 31 ಅಕ್ಟೋಬರ್ 2022, 5:12 IST
Last Updated 31 ಅಕ್ಟೋಬರ್ 2022, 5:12 IST
   

ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅವರು, 'ಇದೀಗ ಸಂಪೂರ್ಣ ಪರಿಶೀಲನೆ ಪ್ರಕ್ರಿಯೆಯನ್ನು ಪರಿಷ್ಕರಿಸಲಾಗುತ್ತಿದೆ'ಎಂದು ಟ್ವೀಟ್‌ ಮಾಡಿದ್ದಾರೆ.

ಖರೀದಿ ಪ್ರಕ್ರಿಯೆ ಮುಗಿಸಿದ ಕೆಲವೇ ದಿನಗಳಲ್ಲಿ ಮಸ್ಕ್‌ ನೀಡಿರುವ ಈ ಹೇಳಿಕೆಚರ್ಚೆ ಹುಟ್ಟುಹಾಕಿದೆ.

ಖಾತೆದಾರರ ಬ್ಲೂ ಟಿಕ್‌ಗೆ ಶುಲ್ಕ ವಿಧಿಸುವ ಕುರಿತು ಟ್ವಿಟರ್‌ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿರುವುದಾಗಿ 'ಪ್ಲಾಟ್‌ಫಾರ್ಮರ್‌' ವರದಿ ಮಾಡಿದೆ.

ADVERTISEMENT

ವರದಿ ಪ್ರಕಾರ,ಬಳಕೆದಾರರು ಮಾಸಿಕ$ 4.99 (₹ 411) ಪಾವತಿಸಿ ಚಂದಾದಾರರಾಗಬೇಕು. ಇಲ್ಲವಾದರೆ, ಬ್ಲೂ ಟಿಕ್‌ ಕಳೆದುಕೊಳ್ಳಬೇಕಾಗುತ್ತದೆ. ಮಸ್ಕ್‌ ಅವರು ಈ ನಿರ್ಧಾರವನ್ನು ಇನ್ನೂ ಅಂತಿಮಗೊಳಿಸಿಲ್ಲ. ಅವರು ಯೋಜನೆಯನ್ನು ಕೈಬಿಡಲೂಬಹುದು. ಆದರೆ, ಬಳಕೆದಾರರ ಖಾತೆ ಪರಿಶೀಲನೆಯು ಬ್ಲೂ ಟಿಕ್‌ನ ಭಾಗವಾಗಿರಲಿದೆ ಎಂದು ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.