ಫೇಸ್‌ಬುಕ್ ಒಡೆತನದ ಮೆಟಾ ಕಂಪನಿಯು ತನ್ನ ಮೈಕ್ರೋ ಬ್ಲಾಗಿಂಗ್ ವೇದಿಕೆ 'ಥ್ರೆಡ್ಸ್' ಅಪ್ಲಿಕೇಶನ್‌ನ ವೆಬ್ ಆವೃತ್ತಿಯನ್ನು ಮುಂದಿನ ವಾರ ಆರಂಭಿಸಲಿದೆ. ಬಲ್ಲ ಮೂಲಗಳು ಈ ಮಾಹಿತಿ ನೀಡಿರುವುದಾಗಿ 'ವಾಲ್ ಸ್ಟ್ರೀಟ್ ಜರ್ನಲ್' ಭಾನುವಾರ ವರದಿ ಮಾಡಿದೆ.
ಥ್ರೆಡ್ಸ್‌ನ ವೆಬ್ ಆವೃತ್ತಿಯ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಥ್ರೆಡ್ಸ್ ಮತ್ತು ಇನ್‌ಸ್ಟಾಗ್ರಾಂ ಸಿಇಒ ಆ್ಯಡಂ ಮೊಸ್ಸೆರಿ ಕಳೆದ ವಾರ ಹೇಳಿದ್ದರು.
ಮೈಕ್ರೊಬ್ಲಾಗಿಂಗ್ ವೇದಿಕೆ ಟ್ವಿಟರ್‌ಗೆ ಪರ್ಯಾಯ ಎಂಬಂತೆ ಬಿಂಬಿತವಾಗಿರುವ ಥ್ರೆಡ್ಸ್ ಆ್ಯಪ್ ಜುಲೈನಲ್ಲಿ ಬಿಡುಗಡೆಯಾಗಿತ್ತು. ಇದರ ಬೆನ್ನಲ್ಲೇ ಮೆಟಾ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಮತ್ತು ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ವಾಕ್ಸಮರ ನಡೆಸಿದ್ದರು.
Twitter vs Threads: 'ಥ್ರೆಡ್ಸ್'ಗೆ ಒಮ್ಮೆ ಲಾಗಿನ್ ಮಾಡಿದರೆ ಖಾತೆ ಡಿಲೀಟ್ ಮಾಡಲಾಗದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.