ADVERTISEMENT

ಪ್ರಗತಿಪರರ ಕುರಿತು ಸತ್ಯ ಹೇಳಿದ್ದಕ್ಕೆ ಬಿಜೆಪಿ ಟ್ವಿಟರ್‌ ಖಾತೆ ಬ್ಲಾಕ್‌!

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 6:30 IST
Last Updated 14 ಫೆಬ್ರುವರಿ 2020, 6:30 IST
ಬಿಜೆಪಿ ಕರ್ನಾಟಕ ಟ್ವಿಟರ್‌ ಖಾತೆ
ಬಿಜೆಪಿ ಕರ್ನಾಟಕ ಟ್ವಿಟರ್‌ ಖಾತೆ   

ಬೆಂಗಳೂರು:ಕರ್ನಾಟಕ ಬಿಜೆಪಿಯ ಟ್ವಿಟರ್‌ ಖಾತೆ ಕೆಲವು ಗಂಟೆಗಳ ವರೆಗೂ ಬ್ಲಾಕ್‌ ಆಗಿತ್ತು. 'ಪ್ರಗತಿಪರರ ಕುರಿತು ಸತ್ಯ ಹೇಳಿದ್ದರಿಂದ' ಸಾಮಾಜಿಕ ಮಾಧ್ಯಮ ಟ್ವಿಟರ್‌ ತಮ್ಮ ಖಾತೆಯನ್ನು ನಿರ್ಬಂಧಿಸಿತ್ತು ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ.

ಫೆಬ್ರುವರಿ 11 (ಮಂಗಳವಾರ) ಕೆಲವು ಗಂಟೆಗಳು ಟ್ವಿಟರ್‌ ಖಾತೆಗೆ ಅಡಚಣೆ ಎದುರಾಗಿತ್ತು ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿರುವುದಾಗಿ ಪಿಟಿಐ ವರದಿ ಮಾಡಿದೆ. 'ಬಿಜೆಪಿ ಕರ್ನಾಟಕ' (@BJP4Karnataka) ಟ್ವಿಟರ್‌ ಖಾತೆಯ ಟೈಮ್‌ಲೈನ್‌ನಲ್ಲಿ ಫೆಬ್ರುವರಿ 10, ರಾತ್ರಿ 9:55ರ ನಂತರ ಯಾವುದೇ ಟ್ವೀಟ್‌ ಕಂಡು ಬಂದಿರಲಿಲ್ಲ.ಫೆ.12ರಿಂದಟ್ವಿಟರ್‌ ಖಾತೆ ಪುನರ್‌ಸ್ಥಾಪಿತವಾಗಿದೆ.

'ಪ್ರಿಯ ಸ್ನೇಹಿತರೇ, ಪ್ರಗತಿಪರರ ಕುರಿತು ಸತ್ಯವಾಡಿದ್ದಕ್ಕೆ ನಮ್ಮ ಖಾತೆಯು ಟ್ವಿಟರ್‌ನಿಂದ ನಿರ್ಬಂಧಿಸಲ್ಪಟ್ಟಿದ್ದು ದುರದೃಷ್ಟಕರ ಸಂಗತಿ. ಸಾರ್ವಜನಿಕವಾಗಿ ಸತ್ಯವನ್ನು ತೆರೆದಿಡುವ ನಮ್ಮ ಪ್ರಯತ್ನದಿಂದ ನಾವು ಹಿಂದೆ ಸರಿಯುವುದಿಲ್ಲ. ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ನಮನಗಳು. ಸತ್ಯಮೇವ ಜಯತೇ! ಜೈ ಹಿಂದ್‌' ಎಂದು ಬಿಜೆಪಿ ಕರ್ನಾಟಕ ಖಾತೆ ಬುಧವಾರ ಟ್ವೀಟ್‌ ಮಾಡಿದೆ.

ADVERTISEMENT

ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ನೀಡಿ ಟ್ವಿಟರ್‌, ಫೆಬ್ರುವರಿ 10ರಂದು ಬಿಜೆಪಿ ಕರ್ನಾಟಕ ಮಾಡಿದ್ದ ಟ್ವೀಟ್‌ವೊಂದನ್ನು ತೆಗೆದು ಹಾಕಿದೆ.

(ಫೆಬ್ರುವರಿ 10ರಂದು ಮಾಡಿರುವ ಟ್ವೀಟ್‌ಗಳಲ್ಲಿ ಕಾಣುತ್ತಿರುವ ಕೊನೆಯ ಟ್ವೀಟ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.