ADVERTISEMENT

VIDEO: ದುಬೈನ ಮರುಭೂಮಿ ಮಧ್ಯೆ ಸಿಲುಕಿದವರು ‘ಊಬರ್‌ ಒಂಟೆ’ ಬುಕ್ ಮಾಡಿ ಪಾರಾದರು!

ಮರುಭೂಮಿಯ ಮಧ್ಯೆ ಸಿಲುಕಿದ ಯುವತಿಯರು ಊಬರ್‌ ಒಂಟೆ ಸೇವೆಯಿಂದ ಪಾರಾದರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2024, 13:21 IST
Last Updated 23 ಅಕ್ಟೋಬರ್ 2024, 13:21 IST
<div class="paragraphs"><p>ಊಬರ್‌ನಲ್ಲಿ ಒಂಟೆ ಬುಕ್ ಮಾಡಿದ ಮಹಿಳೆ</p></div>

ಊಬರ್‌ನಲ್ಲಿ ಒಂಟೆ ಬುಕ್ ಮಾಡಿದ ಮಹಿಳೆ

   

ಇನ್‌ಸ್ಟಾಗ್ರಾಂ ಚಿತ್ರ: jetset.dubai

ಗಾಡಿ ಹಾಳಾಗಿ ದುಬೈನ ಮರುಭೂಮಿಯೊಂದರ ಮಧ್ಯೆ ಸಿಲುಕಿಕೊಂಡಿದ್ದ ಯುವತಿಯರಿಬ್ಬರು ‘ಊಬರ್‌’ನಲ್ಲಿ ಒಂಟೆ ಬುಕ್ ಮಾಡಿ ಪಾರಾಗಿ ಬಂದಿದ್ದಾರೆ. ರಕ್ಷಣೆಗೆ ಮೊರೆ ಇಡುತ್ತಿದ್ದ ಅವರ ಪಾಲಿಗೆ ಊಬರ್‌ನ ‘ಒಂಟೆ ಸೇವೆ’ ಆಪತ್ಭಾಂಧವನಾಗಿದೆ!

ADVERTISEMENT

ಮರುಭೂಮಿಯ ಮಧ್ಯೆ ಸಹಾಯಕ್ಕಾಗಿ ಎದುರು ನೋಡುತ್ತಿರುವ ಇಬ್ಬರ ಪೈಕಿ ಒಬ್ಬರು ಊಬರ್ ಆ್ಯಪ್ ತೆರೆದಿದ್ದಾರೆ. ಈ ವೇಳೆ ಅದರಲ್ಲಿ ಒಂಟೆ ಸೇವೆ ನೀಡುವ ‘Uber Camel’ ಬುಕ್ ಮಾಡಿದ್ದಾರೆ.

ಕೆಲ ಹೊತ್ತಲ್ಲೇ ಒಂಟೆಯ ಮೂಗುದಾರ ಹಿಡಿದುಕೊಂಡು ವ್ಯಕ್ತಿಯೊಬ್ಬ ನಡೆದುಕೊಂಡು ಬಂದಿದ್ದಾರೆ. ಇದನ್ನು ನೋಡಿ ಇಬ್ಬರೂ ಅಚ್ಚರಿಗೊಂಡಿದ್ದಾರೆ.

‘ನಾನು ಒಂಟೆಯ ಚಾಲಕ’ ಎಂದು ಆತ ಪರಿಚಯಿಸಿಕೊಂಡಿದ್ದಾನೆ. ಇವೆಲ್ಲವೂ ಯುವತಿಯರು ಮಾಡಿದ ವಿಡಿಯೊದಲ್ಲಿ ಸೆರೆಯಾಗಿದೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಗೆ ಈ ವಿಡಿಯೊವನ್ನು ಅಪ್ಲೋಡ್ ಮಾಡಿದ್ದು, ‘ಕಳೆದು ಹೋಗಿದ್ದ ನಾವು ಊಬರ್ ಒಂಟೆ ಸೇವೆಯನ್ನು ಬುಕ್ ಮಾಡಿದ್ದೆವು’ ಎಂದು ಹೇಳುತ್ತಿರುವುದೂ ವಿಡಿಯೊದಲ್ಲಿದೆ.

‘ನೀವು ಜೀವನೋಪಾಯಕ್ಕಾಗಿ ಏನು ಮಾಡುತ್ತೀರಿ’ ಎನ್ನುವ ಪ್ರಶ್ನೆಗೆ ‘ನಾನು ಊಬರ್ ಒಂಟೆ ಚಲಾಯಿಸುತ್ತೇನೆ. ಮರುಭೂಮಿ ಮಧ್ಯೆ ಸಿಲುಕಿದವರಿಗೆ ಸಹಾಯ ಮಾಡುತ್ತೇನೆ...’ ಎಂದು ವ್ಯಕ್ತಿ ಹೇಳಿದ್ದಾನೆ.

ದುಬೈ–ಹತ್ತಾ ರಸ್ತೆಯ ಅಲ್ ಬದಾಯೆರ್‌ನಲ್ಲಿ ಈ ವಿಡಿಯೊ ಚಿತ್ರೀಕರಿಸಲಾಗಿದೆ.

ವಿಡಿಯೊಗೆ ಥರಹೇವಾರಿ ಕಮೆಂಟ್‌ಗಳು ವ್ಯಕ್ತವಾಗಿದ್ದು, ಕೆಲವರು ಇದನ್ನು ಫೇಕ್ ಎಂದು ಆರೋಪಿಸಿದ್ದಾರೆ. ‘ದುಬೈನಲ್ಲಿ ಒಂಟೆ ಆರ್ಡರ್ ಮಾಡುವುದು ದೊಡ್ಡ ವಿಷಯವೇನಲ್ಲ’ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಒನ್ನೊಬ್ಬರು ‘ಸುರಕ್ಷತಾ ಕ್ರಮವಾಗಿ ನಂಬರ್ ಪ್ಲೇಟ್ ನೋಡಿ’ ಎಂದು ತಮಾಷೆ ಮಾಡಿದ್ದಾರೆ.

‘ನೀವು ಮರುಭೂಮಿಯ ಮಧ್ಯದಲ್ಲಿ ಇರುವಹಾಗೆ ಕಾಣಿಸುತ್ತಿಲ್ಲ. ನಿಮ್ಮ ಹಿಂಬದಿ ರಸ್ತೆ ಇದೆ’ ಎಂದು ಮತ್ತೊಬ್ಬ ಬಳಕೆದಾರ ಸಂಶಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.