ADVERTISEMENT

ಫೇಸ್‌ಬುಕ್‌ಗೆ ₹519.76 ಕೋಟಿ ದಂಡ ವಿಧಿಸಿದ ಬ್ರಿಟನ್‌

ಏಜೆನ್ಸೀಸ್
Published 20 ಅಕ್ಟೋಬರ್ 2021, 12:22 IST
Last Updated 20 ಅಕ್ಟೋಬರ್ 2021, 12:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್: ಆ್ಯನಿಮೇಟೆಡ್ ಗ್ರಾಫಿಕ್ಸ್ ನವೋದ್ಯಮ ಜಿಫಿ (Giphy) ಖರೀದಿ ವಿಚಾರವಾಗಿ ಮಾಹಿತಿ ನೀಡಲು ವಿಫಲವಾಗಿರುವ ಫೇಸ್‌ಬುಕ್‌ಗೆ ಬ್ರಿಟನ್‌ನ ಸ್ಪರ್ಧಾ ಆಯೋಗ ₹519.76 ಕೋಟಿ (5 ಕೋಟಿ ಪೌಂಡ್) ದಂಡ ವಿಧಿಸಿದೆ.

ಖರೀದಿ ವ್ಯವಹಾರಕ್ಕೆ ಸಂಬಂಧಿಸಿ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸಲು ಪ್ರಜ್ಞಾಪೂರ್ವಕವಾಗಿ ನಿರಾಕರಿಸಿದ್ದಕ್ಕೆ ಫೇಸ್‌ಬುಕ್‌ಗೆ ಈ ದಂಡ ವಿಧಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಜಿಫಿ ನವೋದ್ಯಮವನ್ನು ಕಳೆದ ವರ್ಷ ಫೇಸ್‌ಬುಕ್ ಖರೀದಿಸಿತ್ತು.

ADVERTISEMENT

‘ಮುಖ್ಯವಾದ ಮಾಹಿತಿಯನ್ನು ಒದಗಿಸಲು ನಿರಾಕರಿಸುವುದು ಆದೇಶದ ಉಲ್ಲಂಘನೆ ಎಂದು ಫೇಸ್‌ಬುಕ್‌ಗೆ ಎಚ್ಚರಿಕೆ ನೀಡಿದ್ದೆವು. ಈ ಕುರಿತು ಫೇಸ್‌ಬುಕ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಫೇಸ್‌ಬುಕ್ ಸಲ್ಲಿಸಿದ್ದ ಮನವಿಗೆ ಎರಡು ನ್ಯಾಯಾಲಯಗಳಲ್ಲಿ ಹಿನ್ನಡೆ ಉಂಟಾಗಿತ್ತು. ಆದರೂ ಮಾಹಿತಿ ನೀಡಲು ಕಂಪನಿ ಹಿಂದೇಟು ಹಾಕಿತ್ತು’ ಎಂದು ಆಯೋಗದ ಹಿರಿಯ ನಿರ್ದೇಶಕ ಜೋಯಲ್ ಬ್ಯಾಮ್‌ಫೋರ್ಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ತಾನು ಕಾನೂನಿಗಿಂತಲೂ ಮೇಲೆ ಎಂದು ಭಾವಿಸುವ ಯಾವುದೇ ಕಂಪನಿಗೆ ಇದು ಎಚ್ಚರಿಕೆಯ ಗಂಟೆಯಾಗಿರಲಿದೆ’ ಎಂದೂ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.