ನವದೆಹಲಿ: ಸುಳ್ಳು ಸುದ್ದಿಗಳನ್ನು ಹರಡುವಿಕೆ ಆರೋಪದ ಮೇಲೆ ಕೇಂದ್ರ ಸರ್ಕಾರ ಮಂಗಳವಾರ 8 ಯುಟ್ಯೂಬ್ ಚಾನಲ್‌ಗಳನ್ನು ನಿಷೇಧಿಸಿದೆ.
ನಿಷೇಧಕ್ಕೊಳಗಾದ ಎಂಟು ಚಾನಲ್‌ಗಳು
1. Yahan Sach Dekho
2. Capital TV
3. KPS News
4. Sarkari Vlog
5. Earn Tech India
6. SPN9 News
7. Educational Dost
8. World Best News
ಪ್ರಮುಖವಾಗಿ ಈ ಚಾನಲ್‌ಗಳು ಇತ್ತೀಚೆಗೆ ಲೋಕಸಭೆ ಚುನಾವಣೆ ಹಾಗೂ ಇವಿಎಂ ಮಷಿನ್‌ಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದವು ಎಂದು ಪ್ರೆಸ್ ಇನ್‌ಫರ್ಮೆಶನ್ ಬ್ಯುರೊ (PCB) ಸರ್ಕಾರದ ಗಮನಕ್ಕೆ ತಂದಿತ್ತು. ಅದರ ಆಧಾರದ ಮೇಲೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಕ್ರಮ ಕೈಗೊಂಡಿದೆ.
ಇದರಲ್ಲಿ SPN9 News 4.8 ಮಿಲಿಯನ್ ಫಾಲೊವರ್‌ಗಳನ್ನು ಹೊಂದಿತ್ತು ಹಾಗೂ 148 ಕೋಟಿ ವೀಕ್ಷಣೆ ಕಂಡಿತ್ತು. World Best News 1.7 ಮಿಲಿಯನ್ ಫಾಲೊವರ್‌ಗಳನ್ನು,18 ಕೋಟಿ ವೀಕ್ಷಣೆ ಕಂಡಿತ್ತು.
ಈ ಎಂಟೂ ಚಾನಲ್‌ಗಳು ಲೋಕಸಭೆ ಚುನಾವಣೆ ಹಾಗೂ ಇವಿಎಂ ಮಷಿನ್ ಸೇರಿದಂತೆ ರಾಷ್ಟ್ರಪತಿ, ಪ್ರಧಾನಿ, ಸಚಿವರು ಹಾಗೂ ಕೇಂದ್ರದ ಯೋಜನೆಗಳು, ಆಧಾರ್, ಪ್ಯಾನ್ ಕಾರ್ಡ್ ಬಗ್ಗೆ ಜನರಿಗೆ ತಪ್ಪು ಸಂದೇಶ ಹಾಗೂ ಸುಳ್ಳು ಮಾಹಿತಿಯನ್ನು ಪಸರಿಸುತ್ತಿದ್ದವು ಎಂದು ಆರೋಪಿಸಲಾಗಿದೆ.
ಕೇಂದ್ರ ಸರ್ಕಾರ ಈ ಹಿಂದೆಯೂ ಇಂತಹದೇ ಆರೋಪದ ಮೇಲೆ ಅನೇಕ ಯುಟ್ಯೂಬ್ ಚಾನಲ್‌ಗಳನ್ನು ನಿಷೇಧಿಸಿತ್ತು. ಸಂಬಂಧಿಸಿದ ಇಲಾಖೆಯ ಆದೇಶದ ಮೇಲೆ ಯುಟ್ಯೂಬ್ ತಾಂತ್ರಿಕ ಸಿಬ್ಬಂದಿ ಚಾನಲ್‌ಗಳನ್ನು ನಿಷೇಧಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.