ADVERTISEMENT

ವಾಟ್ಸ್‌ಆ್ಯಪ್ ಅಪ್‌ಡೇಟ್ ಮಾಡಿ: ಸರ್ಟ್ ಇನ್ ಎಚ್ಚರಿಕೆ

ಹ್ಯಾಕರ್ಸ್‌ಗಳಿಂದ ರಕ್ಷಣೆ ಪಡೆಯಲು ವಾಟ್ಸ್‌ಆ್ಯಪ್ ಅಪ್‌ಡೇಟ್ ಮಾಡಿ ಎಂದು ಸೂಚಿಸಿದ ಸರ್ಟ್–ಇನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2022, 9:48 IST
Last Updated 30 ಸೆಪ್ಟೆಂಬರ್ 2022, 9:48 IST
   

ಬೆಂಗಳೂರು: ದೇಶದಲ್ಲಿ ವಾಟ್ಸ್‌ಆ್ಯಪ್ ಉಪಯೋಗಿಸುತ್ತಿರುವ ಎಲ್ಲ ಬಳಕೆದಾರರು ಕೂಡಲೇ ಆ್ಯಪ್ ಅಪ್‌ಡೇಟ್ ಮಾಡಿ ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸರ್ಟ್‌–ಇನ್) ಎಚ್ಚರಿಕೆ ನೀಡಿದೆ.

ವಾಟ್ಸ್‌ಆ್ಯಪ್‌ನಲ್ಲಿ CVE-2022-36934 ಮತ್ತು CVE-2022-27492 ಎಂಬ ಎರಡು ಭದ್ರತಾ ದೋಷ ಪತ್ತೆಯಾಗಿದೆ. ಅದರ ಮೂಲಕ ಹ್ಯಾಕರ್ಸ್ ಸುಲಭದಲ್ಲಿ ವಾಟ್ಸ್‌ಆ್ಯಪ್ ಪ್ರವೇಶಿಸಿ ಹ್ಯಾಕ್ ಮಾಡಬಹುದು. ನಿಮ್ಮ ಅಮೂಲ್ಯವಾದ ಮಾಹಿತಿ ಕಳವಾಗಬಹುದು ಎಂದು ಎಚ್ಚರಿಸಿದ್ದಾರೆ.

ಹೀಗಾಗಿ ಬಳಕೆದಾರರು ವಾಟ್ಸ್ಆ್ಯಪ್ ಅಪ್‌ಡೇಟ್ ಮಾಡುವುದು ಅಗತ್ಯವಾಗಿದೆ.

ADVERTISEMENT

ವಾಟ್ಸ್ಆ್ಯಪ್ ಭದ್ರತಾ ಲೋಪದ ಬಗ್ಗೆ ಯಾವುದೇ ಅಧಿಕೃತ ಸೂಚನೆ ನೀಡಿಲ್ಲ. ಆದರೆ ಬಳಕೆದಾರರು ಆ್ಯಪ್ ಅಪ್‌ಡೇಟ್ ಮಾಡುವಂತೆ ಸರ್ಟ್‌–ಇನ್ ತಜ್ಞರು ಎಚ್ಚರಿಸಿದ್ದಾರೆ.

ವಾಟ್ಸ್‌ಆ್ಯಪ್ ಅ‍ಪ್‌ಡೇಟ್ ಮಾಡುವುದು ಹೇಗೆ?
ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು–
ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ, ವಾಟ್ಸ್‌ಆ್ಯಪ್ ಎಂದು ಸರ್ಚ್ ಮಾಡಿ. ಆಗ ಅಪ್ಲಿಕೇಶನ್‌ ಲಿಸ್ಟ್‌ನಲ್ಲಿ ಕಾಣಿಸಿಕೊಳ್ಳುವ ವಾಟ್ಸ್‌ಆ್ಯಪ್‌ ಅನ್ನು ಅಪ್‌ಡೇಟ್ ಮಾಡಿ.
ಐಫೋನ್ ಬಳಕೆದಾರರು, ಆ್ಯಪ್ ಸ್ಟೋರ್‌ಗೆ ಹೋಗಿ, ಅಲ್ಲಿ ವಾಟ್ಸ್‌ಆ್ಯಪ್ ಸರ್ಚ್ ಮಾಡಿ, ಅಪ್‌ಡೇಟ್ ಎಂದು ಕೊಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.