ADVERTISEMENT

'ಕೋಕ್‌ ಬೆಲೆಗೆ ಬ್ಯಾರೆಲ್‌ ಕಚ್ಚಾ ತೈಲವನ್ನೇ ಖರೀದಿಸಬಹುದು'; ಮೀಮ್‌ಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 7:16 IST
Last Updated 21 ಏಪ್ರಿಲ್ 2020, 7:16 IST
ಕಚ್ಚಾ ತೈಲ ಕುಸಿತ ಮೀಮ್‌– ಚಿತ್ರ ಕೃಪೆ: ಟ್ವಿಟರ್‌
ಕಚ್ಚಾ ತೈಲ ಕುಸಿತ ಮೀಮ್‌– ಚಿತ್ರ ಕೃಪೆ: ಟ್ವಿಟರ್‌    

ಬೆಂಗಳೂರು: ಅಮೆರಿಕ ಕಚ್ಚಾ ತೈಲ ಫ್ಯೂಚರ್ಸ್‌ ದರ ಸೋಮವಾರ ಶೂನ್ಯಕ್ಕಿಂತಲೂ ಕಡಿಮೆಯಾಗಿದೆ. ತೈಲ ಬೆಲೆ ಭಾರೀ ಕುಸಿತ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ ಸಂಭ್ರಮವನ್ನೇ ಸೃಷ್ಟಿಸಿದೆ.

ಜಗತ್ತಿನಾದ್ಯಂತ 20 ಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್‌ ಸೊಂಕು ಪ್ರಕರಣಗಳು ದಾಖಲಾಗಿದ್ದು, 1.70 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಲಾಕ್‌ಡೌನ್‌ ಹಾಗೂ ಮನೆಯಲ್ಲಿಯೇ ಉಳಿಯುವ ಕ್ರಮಗಳಿಂದ ಸಾರ್ವಜನಿಕ ಹಾಗೂ ವೈಯಕ್ತಿಕ ಸಂಚಾರ ವಿರಳವಾಗಿದೆ. ಇದರಿಂದಾಗಿ ಜಗತ್ತಿನಾದ್ಯಂತ ತೈಲ ಬೇಡಿಕೆ ಗಣನೀಯ ಮಟ್ಟಕ್ಕೆ ಇಳಿಕೆಯಾಗಿದೆ. ಬೇಡಿಕೆ ಇಲ್ಲದಿದ್ದರೂ ಪೂರೈಕೆ ನಿರಂತರವಾಗಿರುವುದು ತೈಲ ದರ ಮಹಾ ಕುಸಿತಕ್ಕೆ ಕಾರಣವಾಗಿದೆ.

ಕಚ್ಚಾ ತೈಲ ಸಂಗ್ರಹಕ್ಕೆ ಸಾಕಷ್ಟು ಅವಕಾಶವಿಲ್ಲದೆ, ಅಮೆರಿಕದ ತೈಲ ಮಾರುಕಟ್ಟೆಯ ಮಾನದಂಡ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ (ಡಬ್ಲ್ಯುಟಿಐ) ಪ್ರತಿ ಬ್ಯಾರೆಲ್‌ ದರ –37.63 ಡಾಲರ್‌ಗೆ ಇಳಿಕೆಯಾಯಿತು. ಈ ಮಹಾ ಕುಸಿತಕ್ಕೆ ನೆಟಿಜನ್‌ಗಳು ಮೀಮ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಸಿನಿಮಾ, ಧಾರಾವಾಹಿ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳ ವೀಕ್ಷಣೆಯ ಒಟಿಟಿ ಸೇವೆ ನೀಡುವ ನೆಟ್‌ಫ್ಲಿಕ್‌ಗಿಂತಲೂ ತೈಲ ಅಗ್ಗವಾಗಿದೆ ಎಂದು ಬೆಲೆಗಳನ್ನು ಹೋಲಿಸಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

'ಕೋಕ್‌ ಮತ್ತು ಕಚ್ಚಾ ತೈಲ ಎರಡನ್ನೂ ಒಂದೇ ಬೆಲೆಗೆ ಖರೀದಿಸಬಹುದು', 'ನೀರಿಗೆ ಬದಲು ತೈಲವನ್ನೇ ಬಳಸಬಹುದು' , 'ಹೂಡಿಕೆದಾರರ ನಗು ಕೊನೆಯಾಗಿದೆ', 'ಈ ದೊಡ್ಡ ಮಹಾ ಕುಸಿತವನ್ನು ಊಹಿಸಿರಲಿಲ್ಲ..', 'ಕೋವಿಡ್‌–19ಗೂ ಹೇಗಿತ್ತು, ಈಗ ಹೇಗಿದೆ',... ಹೀಗೆ ಹಾಸ್ಯದ ಲೇಪವಿರುವ ಹಲವು ಟ್ವೀಟ್‌ಗಳು ಟ್ವಿಟರ್‌ನಲ್ಲಿ ತುಂಬಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.