ಕೋಲ್ಕತ್ತ: ಕೊಲ್ಕತ್ತದ ಜಾಧವ್‍ಪುರ್ ವಿಶ್ವವಿದ್ಯಾಲಯದ ಪೊಲಿಟಿಕಲ್ ಸಯನ್ಸ್ ಪ್ರಾಧ್ಯಾಪಕ ಕನಕ್ ಸರ್ಕಾರ್ ಅವರು ಕನ್ಯೆಯನ್ನು ಮೊಹರು ಮಾಡಿದ ಬಾಟಲಿಗೆ ಹೋಲಿಸಿ ಬರೆದ ಫೇಸ್‍ಬುಕ್ ಬರಹಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಎರಡು ದಶಕಗಳ ಕಾಲ ಶಿಕ್ಷಣ ವೃತ್ತಿಯಲ್ಲಿಅನುಭವವಿರುವ ಸರ್ಕಾರ್, Virgin Bride-Why Not? ಎಂಬ ಶೀರ್ಷಿಕೆಯೊಂದಿಗೆ ಫೇಸ್‌ಬುಕ್‍ನಲ್ಲಿ ಬರಹವೊಂದನ್ನು ಪ್ರಕಟಿಸಿದ್ದರು. ಕನ್ಯೆಯಾಗಿರುವ ಯುವತಿಯನ್ನು ಪತ್ನಿಯಾಗಿ ಪಡೆದರೆ ಏನೆಲ್ಲಾ ಲಾಭ ಇದೆ ಎಂಬುದನ್ನು ಕೆಲವು ಹುಡುಗರು ಅರಿತಿಲ್ಲ ಎಂದು ಸರ್ಕಾರ್, ತಮ್ಮ ಬರಹದಲ್ಲಿ ಬರೆದಿದ್ದಾರೆ.
ಅಷ್ಟೇ ಅಲ್ಲದೆ ನೀವು ತಂಪು ಪಾನೀಯ ಅಥವಾ ಬಿಸ್ಕೆಟ್ ಪ್ಯಾಕೆಟ್ ಖರೀದಿಸುವಾಗ ತೆರೆದ ಪ್ಯಾಕೆಟ್‍ನ್ನು ಖರೀದಿಸಲು ಇಚ್ಚಿಸುತ್ತೀರಾ?. ಒಬ್ಬ ಹುಡುಗಿ ಲೈಂಗಿಕ ಸಂಪರ್ಕವೇರ್ಪಡುವವರೆಗೆ ಕನ್ಯೆಯಾಗಿಯೇ ಇರುತ್ತಾಳೆ. ಕನ್ಯೆ ಎಂದರೆ ಮೌಲ್ಯ, ಸಂಸ್ಕೃತಿ ಮತ್ತು ಲೈಂಗಿಕ ಶುಚಿತ್ವವನ್ನೂ ಸಾರುತ್ತಾಳೆ.ಕನ್ಯೆಯೆಂದರೆ ಮೊಹರು ಮಾಡಿದ ಬಾಟಲಿ ಅಥವಾ ತೆರೆಯದ ಪ್ಯಾಕೆಟ್ ಎಂದು ಸರ್ಕಾರ್ ವಾದಿಸಿದ್ದಾರೆ.
ಈ ಪೋಸ್ಟ್ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಸರ್ಕಾರ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಆದರೆ ಕೆಲವು ನೆಟಿಜನ್‍ಗಳು ಈ ಹಿಂದೆ ಸರ್ಕಾರ್ ಇಂಥದ್ದೇ ಸೆಕ್ಸಿಸ್ಟ್ ಪೋಸ್ಟ್ ಗಳನ್ನು ಹಾಕಿದ್ದರು ಎಂದು ಸ್ಕ್ರೀನ್ಶಾಟ್‍ಗಳನ್ನು ಪೋಸ್ಟ್ ಮಾಡಿದ್ದಾರೆ.
2017ರಲ್ಲಿ ಸರ್ಕಾರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿತ್ತು.
ಇದೀಗ ತಮ್ಮ ಹಳೆ ಪೋಸ್ಟ್ಡಿಲೀಟ್ ಮಾಡಿರುವ ಸರ್ಕಾರ, ಪ್ರತಿಯೊಬ್ಬರಿಗೂ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸಲು ಹಕ್ಕು ಇದೆ. ಮಹಿಳೆಯರ ಪರವಾಗಿ ನಾನು ಹಲವಾರು ಪೋಸ್ಟ್ ಗಳನ್ನು ಹಾಕಿದ್ದೆ.ನನ್ನ ಟೈಮ್ ಲೈನ್‍ನಲ್ಲಿ ನೋಡಬಹುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.