ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ವೇಳೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ಸೃಜನಶೀಲತೆಗೆ ಕಡಿವಾಣವಿಲ್ಲ ಎನ್ನುವಂತಾಗಿದೆ. ಪಕ್ಷಿಗಳಿಗೂ ಕೈಗಳು ಇದ್ದಿದ್ದರೆ ಏನಾಗಿರುತ್ತಿತ್ತು ಎನ್ನುವುದನ್ನು ತೋರಿಸಿರುವ ವಿಡಿಯೊಗೆ ನೆಟಿಜನ್‌ಗಳು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. 30 ಸೆಕೆಂಡುಗಳಿರುವ ವಿಡಿಯೊದಲ್ಲಿ ಹಿನ್ನೆಲೆ ಸಂಗೀತವಾಗಿ ಎಲೆಕ್ಟ್ರಿಕ್ ಲೈಟ್ ಆರ್ಕೆಸ್ಟ್ರಾದ 'ಮಿ. ಬ್ಲೂ ಸ್ಕೈ' ಅನ್ನು ಬಳಸಿಕೊಳ್ಳಲಾಗಿದೆ.
ಬ್ರಿಟನ್‌ನ ಜನಪ್ರಿಯ ವಿಡಿಯೊ ನಿರ್ಮಾಪಕ ಡಂಕನ್ ಇವಾನ್ಸ್ಅವರು ತಮ್ಮ ಫೋಟೊಶಾಪ್ ಕೈಚಳಕವನ್ನು ಪಕ್ಷಿಗಳಿಗೆ ಮನುಷ್ಯನ ತೋಳುಗಳನ್ನು ಜೋಡಿಸುವ ಮೂಲಕ ಪ್ರಪಂಚದಲ್ಲಿ ಪಕ್ಷಿಗಳುಕೆಲಸ ಮಾಡುವುದನ್ನು ಕಲ್ಪಿಸಿಕೊಳ್ಳಲು ನೆರವಾಗಿದ್ದಾರೆ. ಬಟ್ಟೆ ಮತ್ತು ಪಾತ್ರೆಗಳನ್ನು ತೊಳೆಯುವುದರಿಂದ ಹಿಡಿದು ಸೆಲ್ಫಿ ತೆಗೆದುಕೊಳ್ಳುವವರೆಗೆ ಮತ್ತು ಗಿಟಾರ್ ನುಡಿಸುವವರೆಗೆ, ಪೆಂಗ್ವಿನ್‌ಗಳು ಮತ್ತು ಸೀ ಗಲ್‌ಗಳಂತಹ ಪಕ್ಷಿಗಳು ನಿರ್ವಹಿಸುವ ಅನೇಕ ಕಾರ್ಯಗಳು ನಗುವಿನ ಚಿಲುಮೆಯನ್ನು ಚಿಮ್ಮಿಸುತ್ತವೆ.
ಅಧಿಕೃತ ಚಾನೆಲ್‌ಗಳಾದ ‘ಕರ್ಲ್‌ಕಿಡ್‌ಲೈಫ್’ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಫೇಸ್‌ಬುಕ್‌ನಲ್ಲಿ 17 ಮಿಲಿಯನ್ ವೀಕ್ಷಣೆ ಮತ್ತು ಟ್ವಿಟರ್‌ನಲ್ಲಿ ಹಂಚಿಕೆಯಾದ ಒಂದೇ ದಿನದಲ್ಲಿ 6 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಅದ್ಭುತ ನಾನು ಮೂರು ಬಾರಿ ನೋಡಿದ್ದೇನೆ ಮತ್ತು ಅದನ್ನು ನೋಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಟ್ವೀಟಿಗರೊಬ್ಬರು ವಿಡಿಯೊವನ್ನು ಶೇರ್ ಮಾಡಿದ್ದಾರೆ
ಮತ್ತೊಬ್ಬರು ಇದು ಅದ್ಭುತ ಎಂದು ವರ್ಣಿಸಿದ್ದಾರೆ.
ಇದಕ್ಕಾಗಿಯೇ ನಾನು ಇಂಟರ್ನೆಟ್‌ಗಾಗಿ ಹಣವನ್ನು ಪಾವತಿಸುತ್ತೇನೆ ಎಂದು ಡಾನ್ ಚುಟಿನೊ ಟೋಸಿಗೊಸೊ ಎಂಬುವರು ಬರೆದುಕೊಂಡಿದ್ದಾರೆ
ಈ ರಾತ್ರಿ ನನಗೆ ಒಳ್ಳೆಯ ನಗು ಬೇಕಾಗಿತ್ತು ಮತ್ತು ಈ ವಿಡಿಯೊ ಅದಕ್ಕೆ ಸಹಾಯ ಮಾಡಿದೆ ಎಂದು ಡಕ್ ಡಕ್ ಗೂಸೆ ಅವರು ವಿಡಿಯೊ ಶೇರ್ ಮಾಡಿದ್ದಾರೆ.
ನನ್ನ ತಲೆಯಲ್ಲಿ ಈ ದೃಶ್ಯಗಳಿಲ್ಲದೆ ಮಿಸ್ಟರ್ ಬ್ಲೂ ಸ್ಕೈ ಅನ್ನು ಕೇಳಬಹುದೆಂದು ನಾನು ಭಾವಿಸುವುದಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.
ಯಾವುದೇ ಕ್ಷಣದಲ್ಲಿ ಪಕ್ಷಿಯು ಹಾರಬಲ್ಲದು ಮತ್ತು ನಿಮಗೆ ಹೊಡೆಯಬಹುದು ಎಂಬುದನ್ನು ನೀವು ಗ್ರಹಿಸಿಕೊಳ್ಳಿ ಎಂದಿದ್ದಾರೆ.
ಇತರೆ ನೆಟ್ಟಿಗರು ಪ್ರತಿಕ್ರಿಯೆಗಳು ಇಲ್ಲಿವೆ...
This is the weirdest thing I've seen in 2020 and that's saying a lot🤣🤣
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.