ನವದೆಹಲಿ: ನಿಯಮಾವಳಿ ಉಲ್ಲಂಘಿಸಿದ ಮತ್ತು ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಾರಣಕ್ಕೆ ದೇಶದಲ್ಲಿ ಕಳೆದ ಜುಲೈನಲ್ಲಿ 23.87 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳು ಮತ್ತು ವಾಟ್ಸ್‌ಆ್ಯಪ್ ನಿಯಮಾವಳಿ, ಸಾಮಾಜಿಕ ತಾಣಗಳ ಬಳಕೆಯ ಮಿತಿ ಮತ್ತು ನಿರ್ಬಂಧವನ್ನು ಮೀರಿ ಕಾರ್ಯನಿರ್ವಹಿಸಿದ ಖಾತೆಗಳ ವಿರುದ್ಧ ಬಂದ ದೂರಿನಂತೆ ವಾಟ್ಸ್‌ಆ್ಯಪ್ ಕ್ರಮ ಕೈಗೊಂಡಿದೆ.
ಜೂನ್ ತಿಂಗಳಲ್ಲಿ 22 ಲಕ್ಷ, ಮೇ ತಿಂಗಳಿನಲ್ಲಿ 19 ಲಕ್ಷ, ಏಪ್ರಿಲ್‌ನಲ್ಲಿ 16 ಲಕ್ಷ ಮತ್ತು ಮಾರ್ಚ್‌ನಲ್ಲಿ 18.05 ಲಕ್ಷ ಖಾತೆಗಳನ್ನು ವಾಟ್ಸ್‌ಆ್ಯಪ್ ನಿರ್ಬಂಧಿಸಿತ್ತು.
ದೇಶದಲ್ಲಿ 50 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಸೇವಾದಾರ ಕಂಪನಿಗಳು, ಪ್ರತಿ ತಿಂಗಳು ವರದಿ ನೀಡುವುದು ಹೊಸ ಮಾಹಿತಿ ಮತ್ತು ತಂತ್ರಜ್ಞಾನ ನಿಯಮದ ಪ್ರಕಾರ ಕಡ್ಡಾಯವಾಗಿದೆ. ಜತೆಗೆ, ದೂರು ಬಂದಿರುವ ಖಾತೆಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.