ನವದೆಹಲಿ: ‘2021ರ ಹೊಸ ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ಭಾರತದಲ್ಲಿ ನಿಯಮ ಉಲ್ಲಂಘಿಸಿದ ಸುಮಾರು 23 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ’ ಎಂದು ಮೆಟಾ ಒಡೆತನದ ವಾಟ್ಸ್‌ಆ್ಯಪ್ ಕಂಪನಿ ತಿಳಿಸಿದೆ.
ಅಕ್ಟೋಬರ್ 1ರಿಂದ ಅಕ್ಟೋಬರ್ 31ರವರೆಗೆ 23,24,000 ವಾಟ್ಸ್‌ಆ್ಯಪ್ ಅಕೌಂಟ್ ಗಳನ್ನು ನಿಷೇಧಿಸಲಾಗಿದೆ. ಇದರಲ್ಲಿ8,11,000 ಅಕೌಂಟ್‌ಗಳನ್ನು ಬಳಕೆದಾರರಿಗೆ ಯಾವುದೇ ಮುನ್ಸೂಚನೆ ನೀಡದೇ ನಿಷೇಧಿಸಲಾಗಿದೆ.
ಭಾರತದಲ್ಲಿ ಸುಮಾರು 40 ಕೋಟಿ ವಾಟ್ಸ್‌ಆ್ಯಪ್ ಖಾತೆಗಳಿದ್ದು, ಅಕ್ಟೋಬರ್‌ನಲ್ಲಿ 701 ಗಂಭೀರ ಪ್ರಕರಣದ ದೂರುಗಳು ಸಲ್ಲಿಕೆಯಾಗಿದ್ದವು. ‘ಹೊಸ ಐಟಿ ಕಾಯ್ದೆಯ ಪ್ರಕಾರ ನಾವು ಪ್ರತಿ ತಿಂಗಳು ನಿಷೇಧಿಸಲಾಗಿರುವ ಖಾತೆಗಳ ಬಗ್ಗೆ ವರದಿ ನೀಡಬೇಕಾಗುತ್ತದೆ’ ಎಂದು ವಾಟ್ಸ್‌ಆ್ಯಪ್‌ನ ವಕ್ತಾರರು ತಿಳಿಸಿದ್ದಾರೆ.
ಹೊಸ ಐಟಿ ಕಾಯ್ದೆಯ ಪ್ರಕಾರ ಭಾರತದಲ್ಲಿ 5 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ಗಳು ಮಾಸಿಕ ವರದಿ ನೀಡಬೇಕು. ಡಿಜಿಟಲ್ ನಾಗರಿಕನ ಹಕ್ಕು ರಕ್ಷಿಸಲು ಈ ಕ್ರಮ ಅನಿವಾರ್ಯ ಎಂದು ಕೇಂದ್ರದ ಮಾಹಿತಿ ಇಲಾಖೆ ತಿಳಿಸಿದೆ.
ವಾಟ್ಸ್‌ಆ್ಯಪ್‌ನ ಮೆಸೇಜ್ ಯುವರ್‌ಸೆಲ್ಫ್ ಎನ್ನುವ ಹೊಸ ಫೀಚರ್ ಸದ್ದು ಮಾಡುತ್ತಿದ್ದು, ಹೊಸ ವಾಟ್ಸ್‌ಆ್ಯಪ್ ಅಪ್‌ಡೇಟ್ ಮೂಲಕ ಬಳಕೆದಾರರಿಗೆ ಒದಗಿಸಿದೆ.ಈ ಅಪ್‌ಡೇಟ್ ಫೀಚರ್ ಮೂಲಕ, ವಾಟ್ಸ್‌ಆ್ಯಪ್‌ನಲ್ಲಿ ನಮಗೆ ನಾವೇ ಚಾಟ್ ಮಾಡಿ, ರಿಮೈಂಡರ್, ನೋಟ್ಸ್, ಶಾಪಿಂಗ್ ಲಿಸ್ಟ್.. ಹೀಗೆ ಹಲವು ಆಯ್ಕೆಗಳನ್ನು ಬಳಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.