ಬೆಂಗಳೂರು: ಮೆಟಾ ಒಡೆತನದ ವಾಟ್ಸ್‌ಆ್ಯಪ್, ಬ್ಯುಸಿನೆಸ್ ಆವೃತ್ತಿಯಲ್ಲಿ ಹಲವು ಹೊಸ ಫೀಚರ್‌ಗಳನ್ನು ಪರಿಚಯಿಸಿದೆ.
ಬಳಕೆದಾರರು ವಾಟ್ಸ್‌ಆ್ಯಪ್ ಬ್ಯುಸಿನೆಸ್ ಆವೃತ್ತಿಯಲ್ಲಿ ಶಾಪಿಂಗ್ ಮಾಡಲು ಅನುಕೂಲವಾಗುವಂತೆ, ಸರ್ಚ್ ಆಯ್ಕೆಯನ್ನು ಒದಗಿಸಲಾಗಿದೆ. ಜತೆಗೆ ಶಾಪಿಂಗ್ ತಾಣಗಳ ಜತೆ ಚಾಟ್ ಮಾಡಲು, ಉತ್ಪನ್ನಗಳನ್ನು ಖರೀದಿಸಲು ಅವಕಾಶವಿದೆ ಎಂದು ಕಂಪನಿ ಹೇಳಿದೆ.
ಆರಂಭಿಕ ಹಂತದಲ್ಲಿ ಬ್ರೆಜಿಲ್, ಕೊಲಂಬಿಯಾ, ಇಂಡೋನೇಷ್ಯಾ, ಮೆಕ್ಸಿಕೊ ಮತ್ತು ಇಂಗ್ಲೆಂಡ್‌ನಲ್ಲಿ ಮಾತ್ರ ಹೊಸ ಫೀಚರ್ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಭಾರತ ಸಹಿತ ಇತರ ರಾಷ್ಟ್ರಗಳಲ್ಲೂ ಲಭ್ಯವಾಗಲಿದೆ.
ಈ ಮೊದಲು ವಾಟ್ಸ್ಆ್ಯಪ್ ಬ್ಯುಸಿನೆಸ್ ಆವೃತ್ತಿ ಮೂಲಕ ಕಂಪನಿಗಳ ವೆಬ್‌ಸೈಟ್‌ಗೆ ಭೇಟಿ ನೀಡಿ, ಅದರ ಮೂಲಕ ಖರೀದಿಸುವ ಆಯ್ಕೆ ನೀಡಲಾಗುತ್ತಿತ್ತು. ಮುಂದೆ, ವಾಟ್ಸ್‌ಆ್ಯಪ್ ಮೂಲಕವೇ ಶಾಪಿಂಗ್ ಮಾಡಲು ಅವಕಾಶ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.