ಬೆಂಗಳೂರು: ಟೆಲಿಗ್ರಾಂ ಮತ್ತು ಸಿಗ್ನಲ್ ಆ್ಯಪ್‌ಗಳ ಜತೆ ಸ್ಪರ್ಧೆಗೆ ಇಳಿದಿರುವ ವಾಟ್ಸ್‌ಆ್ಯಪ್, ನೂತನ ಅಪ್‌ಡೇಟ್ ಒಂದನ್ನು ಬಳಕೆದಾರರಿಗಾಗಿ ಬಿಡುಗಡೆ ಮಾಡಿದೆ.
ಮೆಟಾ ಒಡೆತನದ ವಾಟ್ಸ್‌ಆ್ಯಪ್, ಇತ್ತೀಚೆಗೆ ಕಮ್ಯೂನಿಟಿ ಗ್ರೂಪ್, 32 ಜನರೊಂದಿಗೆ ವಿಡಿಯೊ ಕರೆ, ಗ್ರೂಪ್ ಸದಸ್ಯರ ಮಿತಿ ಏರಿಕೆಯನ್ನು ಪರಿಚಯಿಸಿತ್ತು.
ಈ ಬಾರಿ, ಮೆಸೇಜ್ ಯುವರ್‌ಸೆಲ್ಫ್ ಎನ್ನುವ ಹೊಸ ಫೀಚರ್ ಅನ್ನು ವಾಟ್ಸ್‌ಆ್ಯಪ್ ಅಪ್‌ಡೇಟ್ ಮೂಲಕ ಬಳಕೆದಾರರಿಗೆ ಒದಗಿಸಿದೆ.
ಈ ಅಪ್‌ಡೇಟ್ ಫೀಚರ್ ಮೂಲಕ, ವಾಟ್ಸ್‌ಆ್ಯಪ್‌ನಲ್ಲಿ ನಮಗೆ ನಾವೇ ಚಾಟ್ ಮಾಡಿ, ರಿಮೈಂಡರ್, ನೋಟ್ಸ್, ಶಾಪಿಂಗ್ ಲಿಸ್ಟ್.. ಹೀಗೆ ಹಲವು ಆಯ್ಕೆಗಳನ್ನು ಬಳಸಬಹುದು.
ಹೊಸ ಮೆಸೇಜ್ ಯುವರ್‌ಸೆಲ್ಫ್ ಫೀಚರ್ ಬಳಕೆ ಹೇಗೆ?
ವಾಟ್ಸ್‌ಆ್ಯಪ್ ತೆರೆಯಿರಿ,
ಹೊಸ ಚಾಟ್ ಅನ್ನು ಕ್ಲಿಕ್ ಮಾಡಿ.
ಕಾಂಟಾಕ್ಟ್ ಪಟ್ಟಿಯಲ್ಲಿ ನಿಮ್ಮ ಹೆಸರು ಮೇಲ್ಭಾಗದಲ್ಲಿ ಗೋಚರಿಸುತ್ತದೆ.
ಅದನ್ನು ಸೆಲೆಕ್ಟ್ ಮಾಡಿ, ಮೆಸೇಜ್ ಮಾಡಿ.
ಹೊಸ ಅಪ್‌ಡೇಟ್ ದೇಶದಾದ್ಯಂತ ಎಲ್ಲ ಬಳಕೆದಾರರಿಗೆ ಹಂತಹಂತವಾಗಿ ಲಭ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.