ADVERTISEMENT

new update: ವಾಟ್ಸ್‌ಆ್ಯಪ್‌ನ ಚಾಟ್‌ ಪಿನ್ ಮಾಡಲು ಬಳಕೆದಾರರಿಗೆ ಅವಕಾಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2023, 10:14 IST
Last Updated 3 ಫೆಬ್ರುವರಿ 2023, 10:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲಾ ಆರ್ಥಿಕ ಕ್ಷೇತ್ರಗಳ ಚಟುವಟಿಕೆಗಳು ಸಾಮಾಜಿಕ ಮಾಧ್ಯಮಗಳ ಮೂಲಕವೇ ನಡೆಯುತ್ತಿದೆ. ಅದರಲ್ಲೂ, ವಾಟ್ಸ್‌ಆ್ಯಪ್‌ನ ಗ್ರೂಪ್‌ ಅಪ್ಲಿಕೇಶನ್ ಮುಖಾಂತರವೇ ನಡೆಯುತ್ತಿರುವುದು ಸಾಮಾನ್ಯ.

ಇದೀಗ ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯಪ್‌ ಶೀಘ್ರದಲ್ಲೇ ಹೊಸ ಅಪ್‌ಡೇಟ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ವರದಿಯಾಗಿದೆ. ಇದರಿಂದ ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಚಾಟ್‌ಗಳು ಮತ್ತು ಗುಂಪುಗಳಲ್ಲಿ ಸಂದೇಶಗಳನ್ನು(ಮೆಸೇಜ್) ಪಿನ್ ಮಾಡುವ ಹೊಸ ಫೀಚರ್‌ ಲಭ್ಯವಾಗಿದೆ.

ಈ ಫೀಚರ್‌ನಿಂದಾಗಿ ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಪ್ರಮುಖ ಸಂದೇಶಗಳನ್ನು ಚಾಟ್‌ನ ಮೇಲ್ಭಾಗದಲ್ಲಿ ಪಿನ್ ಮಾಡಬಹುದು ಎಂದು ಮೆಟಾ ಸಂಸ್ಥೆ ತಿಳಿಸಿದೆ. ಇದರಿಂದಾಗಿ ಪ್ರಮುಖ ಮೆಸೇಜ್‌ಗಳು ಅಪ್ಲಿಕೇಶನ್‌ನ ಮೇಲ್ಭಾಗದಲ್ಲಿ ಕಾಣಿಸುವುದರಿಂದ ಗ್ರೂಪ್‌ ಮತ್ತು ಪ್ರತ್ಯೇಕ ಚಾಟ್‌ಗಳ ಬಳಕೆದಾರರಿಗೆ ಉಪಯುಕ್ತವಾಗಲಿದೆ.

ADVERTISEMENT

ಈ ಹೊಸ ಫೀಚರ್‌ ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ಆಗಲಿದೆ. ಮತ್ತೊಂದು ಫೀಚರ್‌ನಲ್ಲಿ ಬಳಕೆದಾರರಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಲು ಶಾರ್ಟ್‌ಕಟ್‌ಗಳನ್ನು ನೀಡಲಾಗಿದೆ ಎಂದು ಮೆಟಾ ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.