ಬೆಂಗಳೂರು: ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ವಾಟ್ಸ್ಆ್ಯಪ್ ಬಳಸುವವರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲು ಮೆಟಾ ಕಂಪನಿ ಮುಂದಾಗಿದೆ.
ಸ್ಮಾರ್ಟ್‌ಫೋನ್ ಆ್ಯಪ್‌ಗಳಲ್ಲಿ ಇರುವಂತೆ, ಬಳಕೆದಾರರು ವಾಟ್ಸ್‌ಆ್ಯಪ್ ವೆಬ್ ಅಪ್ಲಿಕೇಶನ್ ಅನ್ನು ಲಾಕ್ ಮಾಡುವ ಆಯ್ಕೆಯನ್ನು ಕಂಪನಿ ಪರಿಶೀಲಿಸುತ್ತಿದೆ.
ಒಂದೇ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಅನ್ನು ಹಲವು ಮಂದಿ ಬಳಸುವ ಸಂದರ್ಭದಲ್ಲಿ, ಈ ನೂತನ ಆಯ್ಕೆಯಿಂದ ಪ್ರಯೋಜನವಾಗಲಿದೆ.
ಲಾಕ್ ಸ್ಕ್ರೀನ್ ಬಳಸುವುದರಿಂದ, ಖಾಸಗಿತನ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ದೊರೆಯಲಿದೆ ಎಂದು ಕಂಪನಿ ಹೇಳಿದೆ.
ಪರೀಕ್ಷಾರ್ಥ ಬಳಕೆಯ ಬಳಿಕ, ಹೊಸ ಆಯ್ಕೆ ಎಲ್ಲರಿಗೂ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.